ಜಿಲ್ಲಾ ಜಂಗಮ ಸಮಿತಿ ಪ್ರಥಮ ಸಭೆ

IMG-20231001-WA0016
Published on
  • ಗದಗ:

ಜಂಗಮ ಸಮಾಜದ ಉದ್ಯೋಗ, ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗೆ ವೈಯಕ್ತಿಕ ಮತ್ತು ಸಂಘಗಳಿಂದ ಸಹಾಯ ಸೌಲಭ್ಯ ದೊರಕಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಎಸ್.ಪಿ. ಸಂಶಿಮಠ ಹೇಳಿದರು.

ಗದಗ ನಗರದ ಅಡವೀಂದ್ರ ಸ್ವಾಮೀಮಠದಲ್ಲಿ ಭಾನುವಾರ ಜರುಗಿದ ನೂತನ ಜಂಗಮ ಸಮಾಜ ಸಮಿತಿಯ ಪ್ರಥಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೊಸ ಪ್ರಯತ್ನಕ್ಕೆ ಎಲ್ಲರೂ ಸಹಕಾರ ಅಗತ್ಯ. ಗ್ರಾಮೀಣ ಭಾಗದ ಸಮುದಾಯದ ಜನರು ಇನ್ನೂ ಆರ್ಥಿಕ ಸ್ವಾವಲಂಬಿಗಳಾಗಿಲ್ಲ. ಮುಖ್ಯ ಭೂಮಿಕೆಗೆ ಬರಲು ಹಿಂದಡಿ ಇಡುತ್ತಾರೆ. ಉದ್ಯೋಗ, ವಧುವರ ಸಮಾವೇಶ, ಸರ್ಕಾರ ಸೌಲಭ್ಯ, ಸಮುದಾಯದ ಆರೋಗ್ಯ ಸುಧಾರಣೆ, ಸಂಘಟನೆ ಸೇರಿದಂತೆ ಹಲವು ಕಾರ್ಯಗಳಿಗೆ ಮುಖ್ಯ ಭೂಮಿಕೆಗೆ ಬರುವ ಅವಶ್ಯಕತೆ ಇದೆ. ಈ ಕಾರ್ಯಗಳಿಗೆ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಜಂಗಮ ಸಮಾಜ ಸಮಿತಿ ಸಂಘಟಕ ಆನಂದಯ್ಯ ವಿರಕ್ತಮಠ ಮಾತನಾಡಿ, ರಾಜಕೀಯ ಮತ್ತೀತರ ಕಾರಣಗಳಿಂದ ಸಮುದಾಯದಲ್ಲಿ ಒಗ್ಗಟ್ಟಿಲ್ಲ. ಒಗ್ಗಟ್ಟಿನ ಬಲವಿದೆ ಎಂಬುದು ಅರಿಯಬೇಕು. ಸಮಾಜದ ಎಲ್ಲ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು, ಜಂಗಮ ಮುಂದುವರಿಯಬೇಕು ಎಂದರು.

ಶಿವಲಿಂಗಯ್ಯ ಶಾಸ್ತ್ರೀ ಮಾತನಾಡಿದರು. ಸರ್ವತೋಮುಖ ಅಭಿವೃದ್ಧಿಗೆ ರಾಜಕೀಯೇತರ ಒಂದು ನೂತನ ಸಮಿತಿ ರಚನೆ ಅಗತ್ಯವಿದೆ ಎಂದರು.

ಹುಬ್ಬಳ್ಳಿಯ ಚೇಂಬರ್ಸ್ ಆಫ್ ಕಾಮರ್ಸ ಅದ್ಯಕ್ಷರಾಗಿ ಆಯ್ಕೆಯಾದ ಎಸ್.ಪಿ. ಸಂಶಿಮಠ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಬೈಲಾ, ರೂಪರೇಷೆಗಳನ್ನು ಚರ್ಚಿಸಲಾಯಿತು.

ವಿ.ಕೆ. ಗುರುಮಠ, ವಿಜಯಕುಮಾರ್ ಹಿರೇಮಠ, ವೀರಯ್ಯ ಸೋಮನಕಟ್ಟಿಮಠ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net