

ಮಸ್ಕಿ: ಪಟ್ಟಣದಲ್ಲಿ ಜಂಗಮ ಸಮುದಾಯದವರು ಸಮಾಜದ ಸಂಘಟನೆಗೆ ಉತ್ತಮ ಪ್ರಯತ್ನ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದ್ದು, ಜಗದ್ಗುರುಗಳ ಆಶೀರ್ವಾದ ಸದಾ ಜಂಗಮ ಸಮುದಾಯದ ಮೇಲೆ ಇರಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಗಚ್ಚಿನಮಠದಲ್ಲಿ ಜಂಗಮ ಸಮುದಾಯದ ಕಾರ್ಯ ಚಟುವಟಿಕೆಗಳ ಸಭೆಗೆ ಶನಿವಾರ ಸಂಜೆ ಅನಿರೀಕ್ಷಿತವಾಗಿ ಆಗಮಿಸಿದ್ದ ಜಗದ್ಗುರುಗಳು ಸಮುದಾಯದ ಸಂಘಟನೆಯ ಮಾಹಿತಿ ಪಡೆದುಕೊಂಡರು. ಜಂಗಮರು ಇತರ ಸಮುದಾಯದವರಿಗೆ ಮಾರ್ಗದರ್ಶನ ಮಾಡುವ ಕೆಲಸ ಮಾಡುತ್ತಿದ್ದು, ಕೆಟ್ಟ ಕೆಲಸದಲ್ಲಿ ತೊಡಗಿಸಿಕೊಳ್ಳದೆ ಇತರರ ಏಳಿಗೆಯನ್ನು ಬಯಸುವಂತೆ ಸಮಾಜಮುಖಿ ಕೆಲಸ ಮಾಡಬೇಕೆಂದು ತಿಳಿಸಿದರು.
ಪ್ರಮುಖರಾದ ಸಿದ್ದಲಿಂಗಯ್ಯ ಸೊಪ್ಪಿಮಠ, ಆದಯ್ಯಸ್ವಾಮಿ ಕ್ಯಾತ್ನಟ್ಟಿ, ವಿರೂಪಾಕ್ಷಯ್ಯ ಪಾಟೀಲ, ಮಲ್ಲಯ್ಯ ವಸ್ತ್ರದ, ಶಿವಶಂಕ್ರಯ್ಯ ಗಚ್ಚಿನಮಠ, ಶರಣಯ್ಯ ಸೊಪ್ಪಿಮಠ, ಶಿವಕುಮಾರ ಸ್ವಾಮಿ, ಶಿವಶಂಕ್ರಯ್ಯ ಪೂಜಾರಿ ಇತರರಿದ್ದರು.