ಮುದಗಲ್: ಜನತಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಡ್ಯ ಮೂಲದ ಹೊಂಗಿರಣ ಚಾರಿಟಬಲ್ ಟ್ರಸ್ಟ್‌ನಿಂದ ಟೇಬಲ್ ಮತ್ತು ಕುರ್ಚಿಗಳನ್ನು ದೇಣಿಗೆಯಾಗಿ ನೀಡಲಾಗಿದೆ.
ಇದನ್ನೂ ಓದಿ:ಜನತಾಪುರ ಶಾಲೆಗೆ ಟೇಬಲ್-ಕುರ್ಚಿ ದೇಣಿಗೆ
ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ 151 ವಿದ್ಯಾರ್ಥಿಗಳು ಇದ್ದು, ವಚನ ಸಾಹಿತ್ಯ ಅಧ್ಯಯನ ಮಾಡುತ್ತಿರುವುದು ವಿಶೇಷ. ನಲಿ-ಕಲಿ ಶಿಕ್ಷಕ ಮೌನೇಶ್ ಆಚಾರ್ ಸಾಮಾಜಿಕ ಜಾಲತಾಣ ಮೂಲಕ ಮಂಡ್ಯದ ಹೊಂಗಿರಣ ಚಾರಿಟಬಲ್ ಟ್ರಸ್ಟ್ ಸಂಪರ್ಕಿಸಿ ದೇಣಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಕ್ಕಳ ಪ್ರತಿಭೆಯನ್ನು ಆನ್‌ಲೈನ್ ಮೂಲಕ ವೀಕ್ಷಿಸಿದ ಟ್ರಸ್ಟ್ ಮುಖ್ಯಸ್ಥ ಡಾ.ವಿನಯ ಒಂದು ಲಕ್ಷ ರೂ. ಮೌಲ್ಯದಲ್ಲಿ ನಲಿ-ಕಲಿ ತರಗತಿಯ ಎರಡು ಬ್ಲಾಕ್‌ಗಳಿಗೆ 10 ರೌಂಡ್ ಟೇಬಲ್ ಹಾಗೂ 70 ಕುರ್ಚಿಗಳನ್ನು ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಕುರ್ಚಿ, ಟೇಬಲ್ ದೊರೆತಿದ್ದರಿಂದ ಮಕ್ಕಳು ತಪ್ಪದೆ ಶಾಲೆಗೆ ಹಾಜರಾಗುತಿದ್ದಾರೆ ಎಂದು ಮುಖ್ಯ ಶಿಕ್ಷಕ ಗುರುಬಸಪ್ಪ ತಿಳಿಸಿದ್ದಾರೆ.
ದೇಣಿಗೆ ಪಡೆಯಲು ಕಳೆದ ಒಂದು ವರ್ಷದಿಂದ ಪ್ರಯತ್ನ ಪಡಲಾಗಿತ್ತು. ಪಾಠದ ಜತೆಗೆ ನೂರಾರು ವಚನಗಳನ್ನು ಹಾಡುವ ವಿದ್ಯಾರ್ಥಿಗಳ ಪ್ರತಿಭೆಯನ್ನು ವೀಕ್ಷಿಸಿದ ಹೊಂಗಿರಣ ಚಾರಿಟಬಲ್ ಟ್ರಸ್ಟ್ ಆಡಳಿತ ಮಕ್ಕಳ ಕಲಿಕೆಗೆ ಅವಶ್ಯಕ ಇರುವ ಸಾಮಗ್ರಿಗಳನ್ನು ದೇಣಿಗೆ ನೀಡಿದ್ದು ಸಂತೋಷವಾಗಿದೆ. ಮಕ್ಕಳು ಕಲಿಕೆಯಲ್ಲಿ ಉತ್ಸುದಿಂದ ಭಾಗವಹಿಸುತಿದ್ದಾರೆ.ಮೌನೇಶ ಆಚಾರ್ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ, ಜನತಾಪುರ
(21-06.ಎಂಡಿಎಲ್.02)
ಮುದಗಲ್ ಸಮೀಪದ ಜನತಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಡ್ಯ ಮೂಲದ ಹೊಂಗಿರಣ ಚಾರಿಟಬಲ್ ಟ್ರಸ್ಟ್ ನೀಡಿದ ಟೇಬಲ್ ಮತ್ತು ಕುರ್ಚಿಗಳನ್ನು ನೀಡಿರುವುದು.