

ಮಂಡ್ಯ: ತಾಲೂಕಿನ ಹಳೇ ಬೂದನೂರು ಗ್ರಾಮದ ವೆಂಕಟೇಶ್ವರ ವಿದ್ಯಾನಿಕೇತನ ಸಂಸ್ಥೆ ಆವರಣದಲ್ಲಿ ಜ.16ರಂದು ಬೆಳಗ್ಗೆ 10.30ಕ್ಕೆ ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆಯಲ್ಲಿ ಜನತಾದರ್ಶನ ಆಯೋಜಿಸಲಾಗಿದೆ.
‘ನಿಮ್ಮ ಶಾಸಕ ನಿಮ್ಮೂರಿಗೆ, ನಿಮ್ಮ ಮನೆ ಬಾಗಿಲಿಗೆ’ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದು, ಸಾರ್ವಜನಿಕರಿಗೆ ತಮ್ಮ ಅಹವಾಲು ಸಲ್ಲಿಸಬಹುದು. ಅಂತೆಯೇ ಈ ಸ್ವತ್ತು ಆಂದೋಲನಕ್ಕೂ ಚಾಲನೆ ನೀಡಲಾಗುವುದು. ಇದಲ್ಲದೆ ಮೈಸೂರಿನ ಖಾಸಗಿ ಆಸ್ಪತೆ ಸಹಯೋಗದಲ್ಲಿ ಆರೋಗ್ಯ ಉಚಿತ ತಪಾಸಣೆ ಹಾಗೂ ನೇತ್ರ ಪರೀಕ್ಷೆ ಇರಲಿದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ರವಿಕುಮಾರ್ ಗಣಿಗ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.