ಪ್ರಗತಿಪಥದಲ್ಲಿ ಜನತಾ ಸಹಕಾರ ಸಂಘ

21KUDACHI1
Published on

ಕುಡಚಿ: ಸಮೀಪದ ಖೇಮಲಾಪುರ ಗ್ರಾಮದ ಜನತಾ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ ಗುರುವಾರ ಜರುಗಿತು.

ಸಂಘದ ಅಧ್ಯಕ್ಷ ಮಹಾದೇವ ಖಡಕಭಾಂವಿ ಮಾತನಾಡಿ, ರೈತರಿಗಾಗಿ ಸಂಘವು ಅಂದಾಜು ೧೨ ಕೋಟಿ ರೂ. ಬೆಳೆಸಾಲ ನೀಡಿದ್ದು, ೨೧ ಲಕ್ಷ ರೂ.ಗೂ ಹೆಚ್ಚು ಲಾಭ ಗಳಿಸಿದೆ. ಕೃಷಿ ಚಟುವಟಿಕೆಗಾಗಿ ಟ್ರ‍್ಯಾಕ್ಟರ್ ಹಾಗೂ ನೀರಾವರಿಗಾಗಿ ಪೈಪಲೈನ್ ಹಾಗೂ ಹೈನುಗಾರಿಕೆಗೆ ಸಾಲ-ಸೌಲಭ್ಯ ನೀಡಿದೆ ಎಂದರು.

ಕಬ್ಬು ಬೆಳೆಯ ವಿಚಾರ ಸಂಕಿರಣ ನಡೆಯಿತು. ಮಲ್ಲಪ್ಪ ಕಟ್ಟಿ ಮಾತನಾಡಿದರು. ಸಂಘದ ಅಧ್ಯಕ್ಷ ಮಹಾದೇವ ಖಡಕಭಾಂವಿ, ಭುಜಪ್ಪಗೌಡ ರಾಮತೀರ್ಥ, ಮಲ್ಲಪ್ಪ ಕಟ್ಟಿ, ಕಾರ್ಯದರ್ಶಿ ಸಾಗರ ಖಡಕಭಾಂವಿ, ಆಡಳಿತ ಮಂಡಳಿ ಸದಸ್ಯರು ಹಾಗೂ ರೈತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net