ರಾಜಕೀಯಕ್ಕಾಗಿ ಸದನ ಬಳಕೆ ಸಲ್ಲದು, ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಆಧ್ಯತೆ: ಅನಿಲ್​

10GDG03B
Published on
  • ಜನತಾ ಸದನದಲ್ಲಿ ಬಸವಣ್ಣ, ಅಂಬೇಡ್ಕರ್​ ವಿಚಾರಧಾರೆ ಪ್ರಸ್ತಾಪ

ವಿಜಯವಾಣಿ ಸುದ್ದಿಜಾಲ ಗದಗ
ಹಿಂಬಾಲಕರಾಗಿ, ಜೈಕಾರ ಕೂಗಿ ರಾಜಕೀಯ ಸ್ಥಾನಮಾನ ಪಡೆಯುವ ರಾಜಕೀಯ ಸಂದಿಗ್ಧ ಸ್ಥಿತಿ ನಿರ್ಮಾಣ ಆಗಿರುವಾಗ, ಸ್ಥಳಿಯ ಮಟ್ಟದ ಜನಪ್ರತಿನಿಧಿಗಳಿಗೆ ಸ್ಥಾನಮಾನ ಕೊಡುವ ನಿಟ್ಟಿನಲ್ಲಿ ಮೊದಲ ಬಾರಿಗೆ ಸಂಸತ್​ ಮತ್ತು ವಿಧಾನಸಭೆ ಅಧಿವೇಶನದಂತೆಯೇ ಗದಗ ನಗರದಲ್ಲಿ ಜನತಾ ಸದನ ಹಮ್ಮಿಕೊಂಡಿದ್ದೇವೆ ಎಂದು ಸಭಾ ನಾಯಕ ಅನಿಲ ಪಿ ಮೆಣಸಿನಕಾಯಿ ಹೇಳಿದರು.
ನಗರದ ಗಾಣಿಗೇರ ಭವನದಲ್ಲಿ ಜರುಗಿದ ಜನತಾ ಸದನದ ಸಭಾ ನಾಯಕರಾಗಿ ಮಾತನಾಡಿದ ಅವರು, ಸದನದಲ್ಲಿ ಭಾಗಿಯಾದ ಮತ್ತು ಬಸವಣ್ಣ, ಅಂಬೇಡ್ಕರ ವಿಚಾರ ಪ್ರಸ್ತಾಪಿಸಿದ ಸದಸ್ಯರಿಗೆ ಧನ್ಯವಾದ ತಿಳಿಸಿದರು. ಜನತಾ ಸದನ ರಾಜಕೀಯಕ್ಕಾಗಿ ಬಳಕೆ ಸಲ್ಲದು. ಗದಗ ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಬೆಳಕಿಗೆ ತರುವುದು ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸದನ ಏರ್ಪಡಿಸಲಾಗಿದೆ. ಕ್ಷೇತ್ರದ ಸಮಸ್ಯೆಗಳ ಚರ್ಚೆಗೆ ಮತ್ತು ಸಲಹೆಗಳ ಮುಕ್ತ ಚರ್ಚೆ ಜರುಗಲಿವೆ ಎಂದರು.
ಸ್ಥಳಿಯ ನಾಯಕರಿಗೆ ಸದನ ಉತ್ತಮ ವೇದಿಕೆಯಾಗಿದೆ. ರಾಜಕೀಯದಲ್ಲಿ ಯುವಕರಿಗೆ ಅವಕಾಶ ಮತ್ತು ನಾಯಕತ್ವ ದೊರೆಯಬೇಕೆಂಬ ಆಶಯ ಇಟ್ಟುಕೊಳ್ಳಲಾಗಿದೆ. ನಮ್ಮ ಬಗ್ಗೆ ಜನರಿಗೆ ವಿಶ್ವಾಸ ಬರಬೇಕು ಮತ್ತು ಸಂವಿಧಾನದ ಮೂಲ ಉದ್ದೇಶ ಎಲ್ಲರಿಗೂ ಅಎರಿವಿಗೆ ಬರಬೇಕು ಎಂಬ ಉದ್ದೇಶದಿಂದ ಈ ಸದನ ಹಮ್ಮಿಕೊಳ್ಳಲಾಗಿದೆ ಎಂದು ಅನಿಲ ಮೆಣಸಿನಕಾಯಿ ಹೇಳಿದರು.

ಕಡತಗಳ ಸಂಗ್ರಹ:
ಇಲ್ಲಿ ಚರ್ಚೆಯಾಗುವ ಪ್ರತಿ ವಿಷಯ, ಸಮಸ್ಯೆ ಮತ್ತು ಅದಕ್ಕೆ ಕಂಡುಕೊಳ್ಳುವ ಪರಿಹಾರವನ್ನು ದಾಖಲೆ ಸಮೇತ ಕ್ರೂಢಿಕರಿಸಲಾಗುತ್ತದೆ. ಇಲ್ಲಿ ಪ್ರತಿಯೊಬ್ಬರಿಗೆ ಒಂದೊಂದು ಇಲಾಖೆಯ ಪ್ರತಿನಿಧಿನಾಗಿಸುತ್ತೇವೆ. ಅವರ ಇಲಾಖೆಗೆ ಸಂಬಂಧಿಸಿದ ಎಲ್ಲ ಸಮಸ್ಯೆ, ವಿಷಯ ಮತ್ತು ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆ ಅವರದ್ದೇ ಆಗಿರುತ್ತದೆ. ಮುಂದಿನ ಅಧಿವೇಶದಲ್ಲಿ ಸಭಾನಾಯಕರ ಸಹಿಯೊಂದಿಗೆ ಕಡತಗಳ ಸಂಗ್ರಹಿ ಇಡಲಾಗುತ್ತದೆ ಎಂದರು ಅನಿಲ್​ ಹೇಳಿದರು.

ಸಂತಾಪ ಸೂಚನೆ:
ಸಭಾಧ್ಯಕ್ಷ ನಿವೃತ್ತ ನ್ಯಾಯಾಧೀಶ ನಾಗರಾಜ ಅರಳಿ ಅನುಮತಿ ಮೇರೆಗೆ ಜನತಾ ಸದನ ಆರಂಭಗೊಂಡಿತು. ಆರಂಭದಲ್ಲಿ ಇತ್ತಿಚೆಗೆ ನಿಧನರಾದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಅವರಿಗೆ ಸದನ ಸಂತಾಪ ಸೂಚಿಸಿತು. ಎಂ.ಎಂ. ಹಿರೇಮಠ ಅವರು ಶ್ರೀಶೈಲಪ್ಪ ಬಿದರೂರು ಅವರ ಕುರಿತು ಸಂತಾಪ ವಿಷಯ ಸದನಕ್ಕೆ ಮಂಡಿಸಿದರು.

ಬಾಕ್ಸ್​:
ಜನತಾ ಸದನ ಆರಂಭಕ್ಕೂ ಮುನ್ನ ಮಾಜಿ ಸಚಿವ, ನರಗುಂದ ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅನಿಲ ಮೆಣಸಿನಕಾಯಿ ಆತ್ಮಸ್ಥೆ$ರ್ಯ ಮೆಚ್ಚಲೇಬೇಕು. ಚುನಾವಣೆಯಲ್ಲಿ ಸೋಲು ಗೆಲವು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಅನಿಲ ಹೊಂದಿದ್ದಾರೆ. ಅವರಂತೆ ನಾಯಕತ್ವ ಎಲ್ಲರೂ ಬೆಳಸಿಕೊಳ್ಳಬೇಕು ಎಂದು ನುಡಿದರು.

ಕೋಟ್​:
ವಿಶ್ವದ ಮೊದಲ ಸಂಸತ್​ ನೀಡಿದ ಬಸವಣ್ಣ ಅವರ ಕಲ್ಪನೆ ಸಾಕಾರಗೊಂಡಿದೆ. ಸಕಾರಾತ್ಮಕ ವಿಚಾರಗಳನ್ನು ಪ್ರಸ್ತುತ ಪಡಿಸುವುಸದಕ್ಕೆ ಸ್ಥಳಿಯ ಅಧಿವೇಶನ ವೇದಿಕೆ ಆಗಲಿದೆ
- ರಾವೇಂದ್ರ ಯಳವತ್ತಿ, ಜನತಾ ಸದನ ಸದಸ್ಯರು.

ಕೋಟ್​:
ಕಾಯಕವೇ ಕೈಲಾಸ ಎಂಬ ನುಡಿಯಂತೆ ನಡೆಯಬೇಕಾದರೆ ಬಸವಣ್ಣ ಕಂಡ ಕನಸನ್ನು ನನಸು ಮಾಡಲು ಇಂತಹ ಮಾರ್ಗಸೂಚಿ ಅನ್ವಹಿಸಿಕೊಳ್ಳಬೇಕು. ಇಲ್ಲವಾದರೆ ಜೀವನ ಪರಿಪೂರ್ನ ಆಗುವುದಿಲ್ಲ
- ಅನಿಲ ಅಬ್ಬಿಗೇರಿ, ಜನತಾ ಸದನ ಸದಸ್ಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net