ಜನತಾ ದರ್ಶನ! ಪದ್ಮ ಭೂಷಣ ಪ್ರಶಸ್ತಿ ನೀಡುವಂತೆ ಮನವಿ

20230930_161703
Published on

ವಿಜಯವಾಣಿ ಸುದ್ದಿಜಾಲ ಗದಗ
ಶನಿವಾರ ಗದಗ ಜಿಲ್ಲಾಡಳಿತ ಭವನ ಆವರಣದಲ್ಲಿ ಜರುಗಿದ ಜನತಾದರ್ಶನ ಕಾರ್ಯಕ್ರಮದಲ್ಲಿ ಅಬ್ದುಲ್​ ಮುಸ್ತುಸಾಬ್​ ಎಂಬುವರು ಪದ್ಮಭೂಷಣ ಪ್ರಶಸ್ತಿ ಕೊಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್​.ಕೆ. ಪಾಟೀಲ ಅವರಿಗೆ ಮನವಿ ಮಾಡಿಕೊಂಡ ಘಟನೆ ನೆರೆದ ಸಾರ್ವಜನಿಕರನ್ನು ಚಿಂತಿಸುವಂತೆ ಮಾಡಿತಲ್ಲದೇ, ನಗೆ ಪಾಟಲಿಗೆ ನೂಕಿತು.
ಹೂವಿನಹಡಗಲಿ ನಿವಾಸಿ ಅಬ್ದುಲ್​ ಎಂಬುವರು ಪಶಸ್ತಿ ದೊರಕಿಸಿಕೊಡುವಂತೆ ಮನವಿ ಮಾಡಿದರು. ಕಳೆದ 12 ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ, ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸಿದ್ದೇನೆ. ನನ್ನ ಸೇವೆ ಪರಿಗಣಿಸಿ ಪಶಸ್ತಿ ದೊರಕಿಸಿಕೊಡುವಂತೆ ಶಿಫಾರಸು ಮಾಡಬೇಕೆಂದು ಮನವಿ ಮಾಡಿದರು. ಅರ್ಜಿ ಸ್ವೀಕರಿಸಿದ ಸಚಿವರು "ನಿಮ್ಮ ಸೇವಾ ಮನೋಭಾವನ್ನು ಗೌರವಿಸುತ್ತೇವೆ. ಆದರೆ, ಪ್ರಶಸ್ತಿ ಕೊಡಿಸುವುಸು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಚಚಿರ್ಸುತ್ತೇವೆ ಎಂದಷ್ಟೇ ಹೇಳೀದರು.
ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್​, ಕೇಂದ್ರ ಸರ್ಕಾರ ನನ್ನ 33 ಬೇಡಿಕೆಗಳನ್ನು ಈಡೇರಿಸಿದೆ. ಸಂವಿಧಾನ ತಿದ್ದುಪಡಿಗಳಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿದೆ. ನನ್ನ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಬೇಕು ಎಂದು ತಿಳಿಸಿದರು.

  • ಶಿರಹಟ್ಟಿ ಕ್ಷೇತ್ರದ ಪರಾಜಿತ ಕಾಂಗ್ರೆಸ್​ ಅಭ್ಯಥಿರ್ ಸುಜಾತಾ ದೊಡ್ಡಮನಿ ಅವರು ಅಬ್ದುಲ್​ ಮುಸ್ತುಸಾಬ್​ ಅವರಿಗೆ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸು ಮಾಡುವಂತೆ ಎಚ್​.ಕೆ. ಪಾಟೀಲರಿಗೆ ಪತ್ರ ಬರೆದಿದ್ದರು. ಈ ಪತ್ರದ ಸಮೇತ ಬಂದಿದ್ದ ಅಬ್ದುಲ್​ ಅವರು ಸಚಿವರಿಗೆ ಜನತಾ ದರ್ಶನದಲ್ಲಿ ಮನವಿ ಮಾಡಿದರು. ಸುಜಾತಾ ದೊಡ್ಡಮನಿ ಅವರು ಪತ್ರ ನೀಡಿದ್ದನ್ನು ವೇದಿಕೆಯಲ್ಲಿ ಸಚಿವರಿಗೆ ಮತ್ತು ಜಿಲ್ಲಾಡಳಿತ ಅಧಿಕಾರಿಗಳಿಗೆ ಪ್ರದಶಿರ್ಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net