ಜನತಾ ಕರ್ಪ್ಯೂ ದುರುಪಯೋಗದಿಂದ ಯುವಕನ ಸಾವು: ಖಾಲಿ ರಸ್ತೆಯಲ್ಲಿನ ಬೈಕ್​ ಕ್ರೇಜ್​ಗೆ​ ಬಲಿ

Youth deth
Published on

ಬೆಂಗಳೂರು: ಕರೊನಾ ವೈರಸ್​ ಸೋಂಕಿಗೆ ತಡೆನೀಡಲು ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಪ್ಯೂಗೆ ಆದೇಶ ನೀಡಿರುವ ಪರಿಣಾಮ ಬೆಂಗಳೂರಿನ ರಸ್ತೆಗಳೆಲ್ಲಾ ಖಾಲಿ ಖಾಲಿಯಾಗಿದೆ. ಆದರೆ, ಇದೇ ಖಾಲಿ ರಸ್ತೆ ಯುವಕನೊಬ್ಬನ ಪ್ರಾಣವನ್ನು ತೆಗೆದುಕೊಂಡಿದೆ.

ಹೌದು, ಬಿಕೋ ಎನ್ನುತ್ತಿರುವ ರಸ್ತೆಯನ್ನು ನೋಡಿದ ಯುವಕನೊಬ್ಬ ತನ್ನ ಬೈಕ್​ ಕ್ರೇಜ್​ನಿಂದಾಗಿ ವೇಗದ ಚಾಲನೆ ಮಾಡಿ ಅಪಘಾತಕ್ಕೀಡಾಗಿದ್ದಾನೆ. ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಫ್ಲೈ ಓವರ್ ಮೇಲೆ ಘಟನೆ ನಡೆದಿದೆ.

ಯುವಕ ಹೆಸರು ಪತ್ತೆಯಾಗಿಲ್ಲ. ಬೌನ್ಸ್ ಬೈಕ್​ನಲ್ಲಿ ಮೈಸೂರು ರಸ್ತೆಯಿಂದ ಬೆಂಗಳೂರು ಮಾರ್ಗವಾಗಿ ಬರುತ್ತಿದ್ದ. ಟ್ರಾಫಿಕ್ ಇಲ್ಲದ ಕಾರಣ ಅತೀ ವೇಗವಾಗಿ ಚಾಲನೆ ಮಾಡಿಕೊಂಡು ಬರುವಾಗ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಬೈಕ್ ಸವಾರ ಸ್ಥಳದಲ್ಲೆ ಸಾವಿಗೀಡಾಗಿದ್ದಾನೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net