ಜನತಾ ಬಜಾರ್ ಮಾರುಕಟ್ಟೆ ಹಸ್ತಾಂತರಕ್ಕೆ ಅಬ್ಬಯ್ಯ ಸೂಚನೆ

JANATA NEW
Published on

ಹುಬ್ಬಳ್ಳಿ : ಇಲ್ಲಿನ ಜನತಾ ಬಜಾರ್ ಮಾರುಕಟ್ಟೆ ಉದ್ಘಾಟನೆಗೊಂಡು ಏಳು ತಿಂಗಳು ಕಳೆದರೂ ಮಳಿಗೆಗಳು ಹಸ್ತಾಂತರ ಮಾಡದೇ ಇರುವುದಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ. ಮಳಿಗೆ ಹಸ್ತಾಂತರ ಮಾಡಲು ಸರ್ಕಾರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು. ಯವುದೇ ಕಾರಣಕ್ಕೂ ವಿಳಂಬ ಧೋರಣೆ ಸಹಿಸುವುದಿಲ್ಲ ಎಂದು ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಅವರು ಶನಿವಾರದಂದು ಹು-ಧಾ ಪೂರ್ವ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಮಹಾನಗರ ಪಾಲಿಕೆ ಆಯುಕ್ತರ ಸಮ್ಮುಖದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದರು.

ಜನತಾ ಬಜಾರ್ ಮಾರುಕಟ್ಟೆಗೆ ಸಂಬಂಧಿಸಿದ ದಾಖಲೆ ಒದಗಿಸಿ ಮಾಹಿತಿ ನೀಡುವಂತೆ ಶಾಸಕರು ಕೇಳುತ್ತಿದ್ದಂತೆ, ಅಧಿಕಾರಿಗಳು ಸಮರ್ಪಕ ಮಾಹಿತಿ ಒದಗಿಸಲಿಲ್ಲ. ಅಧಿಕಾರಿಗಳು ಸಮರ್ಪಕ ಮಾಹಿತ ಇಟ್ಟುಕೊಳ್ಳದೇ ಪಾಲಿಕೆ ಮಾರುಕಟ್ಟೆ ವಿಭಾಗವನ್ನು ಬೇಕಾಬಿಟ್ಟಿ್ಟುಾಗಿ ನಡೆಸುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಯಾವ ವ್ಯಾಪಾರಸ್ಥರ ಹೆಸರಿನಲ್ಲಿ ಮಳಿಗೆ ಇರುತ್ತದೆಯೋ ಅವರೇ ವ್ಯಾಪಾರ ವಹಿವಾಟು ಮಾಡುತ್ತಿರುವ ಬಗ್ಗೆ ಪರಿಶೀಲಿಸಬೇಕು. ಒಬ್ಬರೇ ಬೇರೆ ಬೇರೆಯವರ ಹೆಸರಲ್ಲಿ ಮಳಿಗೆ ಪಡೆದು ಬಾಡಿಗೆ ಅಥವಾ ಹೆಚ್ಚಿನ ದುಡ್ಡು ಪಡೆದು ಪರಭಾರೆ ಮಾಡಿದವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಂತಹ ಪ್ರಕರಣ ಕಂಡುಬಂದಲ್ಲಿ ಮಳಿಗೆಯನ್ನು ಪಾಲಿಕೆ ವಶಕ್ಕೆ ಪಡೆಯಬೇಕೆಂದು ಶಾಸಕರು ಸೂಚಿಸಿದರು.

ಒಂದೇ ವಲಯದ 14 ಸಿಬ್ಬಂದಿ ಎರವಲು :

ಪಾಲಿಕೆ ವಲಯ ಕಚೇರಿ 9ರಲ್ಲಿ 14 ಸಿಬ್ಬಂದಿ ಎರವಲು ಸೇವೆ ಮೇಲೆ ಬೇರೆ ವಲಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ನಮ್ಮ ವಲಯದಲ್ಲಿ ಜನರಿಗೆ ಸಮರ್ಪಕ ಸೇವೆ ಒದಗಿಸಲು ಆಗುತ್ತಿಲ್ಲ. ಇರುವ ಸಿಬ್ಬಂದಿಗೆ ಹೊರೆ ಯಾಗುತ್ತಿದ್ದು, ಸಿಬ್ಬಂದಿ ಕೊರತೆ ನೀಗಿಸುವಂತೆ ಅಧಿಕಾರಿಗಳು ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಎರವಲು ಹೋದ ಸಿಬ್ಬಂದಿಯನ್ನು ಕೂಡಲೇ ಮೂಲ ಸ್ಥಾನಕ್ಕೆ ಮರಳುವಂತೆ ಆದೇಶ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಎಲ್ ಆಂಡ್ ಟಿ ಕರ್ಮ ಕಾಂಡ

ಎಲ್ಲೆಡೆ ನೀರಿನ ಕೊರತೆ ಕಾಣುತ್ತಿದೆ. ಕುಡಿಯುವ ನೀರಿನ ಟ್ಯಾಂಕರ್ ಕೂಡ ಸ್ಥಗಿತಗೊಂಡಿದ್ದು, ಜನರು ಪರದಾಡುತ್ತಿದ್ದಾರೆ. ಇವರು ಅಳವಡಿಸುತ್ತಿರುವ ಪೈಪ್​ಗಳು ಕಳಪೆ ಗುಣಮಟ್ಟದ್ದಾಗಿದ್ದು, ಪರೀಕ್ಷೆ ವೇಳೆ ಸ್ಪಷ್ಟವಾಗಿದೆ. ಅವಳಿ ನಗರದ ಕುಡಿಯುವ ನೀರು ಸರಬರಾಜು ನಿರ್ವಹಣೆ ಹೊತ್ತಿರುವ ಎಲ್ ಆಂಡ್ ಟಿ ಕಂಪನಿಯು ಅವಳಿ ನಗರದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅಧಿಕಾರಿಗಳ ವಿರುದ್ಧ ಆಕೊ್ರೕಶ ವ್ಯಕ್ತಪಡಿಸಿದರು. ಎಲ್ ಆಂಡ್ ಟಿ ಜತೆಗಿನ ಒಪ್ಪಂದವನ್ನು ರದ್ದು ಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಪಾಳಿಕೆ ಆಯುಕ್ತರಿಗೆ ಸೂಚಿಸಿದರು.

ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ವಿವಿಧ ಇಲಾಖೆ ಅಧಿಕಾರಿಗಳು, ವಲಯ ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net