

ಪುತ್ತೂರು: ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಜನಸ್ಪಂದನೆ ಕಾರ್ಯಕ್ರಮವಾಗಿದ್ದು, ಇಲಾಖೆಯ ಅಽಕಾರಿಗಳು ಆಗಮಿಸಿ ಜನರ ಅಗತ್ಯಗಳಿಗೆ ಸ್ಪಂದಿಸಬೇಕು. ಕಾನೂನು ಚೌಕಟ್ಟಿನ ಒಳಗೆ ಅರ್ಜಿಗಳನ್ನು ನಿಗದಿತ ಕಾಲಮಾನದಲ್ಲಿ ವಿಲೇವಾರಿ ಮಾಡಿ ಜನರಿಗೆ ಉತ್ತರ ನೀಡಬೇಕು. ಆಡಳಿತಾತ್ಮಕವಾಗಿ ಶಾಸಕ ಹಾಗೂ ಜಿಲ್ಲಾಽಕಾರಿಯವರ ತೀರ್ಮಾನ ಅಂತಿಮವಾಗಿರುತ್ತದೆ ಎಂದು ಪುತ್ತೂರು ತಹಸೀಲ್ದಾರ ಪುರಂದರ ಹೆಗ್ಡೆ ಹೇಳಿದರು.
ಸೋಮವಾರ ತಾಲೂಕು ಕಚೇರಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾಮಟ್ಟದ ಎಲ್ಲ ಅಽಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಖರ್ಚುವೆಚ್ಚಗಳನ್ನು ಆಯಾ ವ್ಯಾಪ್ತಿಯಲ್ಲೇ ಸರಿದೂಗಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಎಲ್ಲರ ಗಮನಕ್ಕೆ ತರುವುದು ನಮ್ಮ ವಿಚಾರವಾಗಿದ್ದು, ಅದಕ್ಕೆ ಸ್ಪಂದಿಸುವುದು ಆಯಾ ಇಲಾಖೆಗೆ ಬಿಟ್ಟ ವಿಚಾರವಾಗಿದೆ. ಜನರ ಬಳಿಗೆ ಸರ್ಕಾರ ಹೋಗಬೇಕು ಎಂಬ ನಿಟ್ಟಿನಲ್ಲಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಜೂ.೨೮ಕ್ಕೆ ಪುತ್ತೂರಿನಲ್ಲಿ ಕಷ್ಟ ಎಂಬ ಕಾರಣ ಜು.೨ಕ್ಕೆ ೧೦ಗಂಟೆಗೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಾಽಕಾರಿ ನವೀನ್ ಭಂಡಾರಿ ಮಾತನಾಡಿ, ಪೆಂಡಿಂಗ್ ಇರುವ ಅರ್ಜಿಗಳ ವಿಷಯವೇ ಮೊದಲು ಚರ್ಚೆಗೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಅಂತಹ ಅರ್ಜಿಗಳು ಇದ್ದಲ್ಲಿ ಅದಕ್ಕೆ ಅಗತ್ಯ ಕ್ರಮ ಕೈಗೊಳುವ ಅಗತ್ಯವಿದೆ. ಹೊಸ ವಿಚಾರಗಳಿಗೆ ಅಲ್ಲಿ ಉತ್ತರ ನೀಡುವ ಕೆಲಸ ಮಾಡಬಹುದು. ದೂರು ಸ್ವೀಕಾರಕ್ಕೆ ಪ್ರತ್ಯೇಕ ಕೌಂಟರ್ ತೆರೆಯುವ ಅವಗ್ಯವಿದೆ ಎಂದು ತಿಳಿಸಿದರು.
ನಗರ ಸಭೆ ಪೌರಾಯುಕ್ತ ಮಧು ಎಸ್. ಮನೋಹರ್, ನಗರ ಠಾಣೆ ಪೊಲೀಸ್ ಉಪನಿರೀಕ್ಷಕ ನಂದಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶೋಕಾಸ್ ನೋಟೀಸ್‌ಗೆ ಸೂಚನೆ
ವಿವಿಧ ಇಲಾಖೆಯ ಅಽಕಾರಿಗಳು ತಾಲೂಕು ಆಡಳಿತದಿಂದ ನಡೆಯುವ ಯಾವ ಕಾರ್ಯಕ್ರಮಕ್ಕೂ ಸರಿಯಾಗಿ ಹಾಜರಾಗುತ್ತಿಲ್ಲ. ರಾಷ್ಟ್ರೀಯ ಹಬ್ಬಗಳ ಆಚರಣೆಯ ಸಂದರ್ಭದಲ್ಲೂ ಹಾಜರಾತಿ ಇರುವುದಿಲ್ಲ. ನಾನು ಕರೆಸಬೇಕಾ ಅಥವಾ ಅವಾರಾಗಿಯೇ ಬರುತ್ತಾರಾ ಎಂದು ತಹಸೀಲ್ದಾರ್ ಗರಂಗೊಂಡರು. ಗೈರಾದ ಇಲಾಖೆಯವರಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸುವಂತೆ ಸೂಚನೆಯನ್ನು ನೀಡಿದರು. ಇದಾಗುತ್ತಿದ್ದಂತೆ ಕೆಲವು ಅಽಕಾರಿಗಳು ಸಭೆಗೆ ಆಗಮಿಸಿ ತಮ್ಮ ಅಭಿಪ್ರಾಯಗಳನ್ನು ಸೂಚಿಸಿದರು.
ಖರ್ಚು ಹೊಂದಿಸುವುದು ಕಷ್ಟ!
ಜನಸ್ಪಂದನ ಕಾರ್ಯಕ್ರಮಕ್ಕೆ ಅಗತ್ಯ ಇರುವ ಮೈಕ್ ಹಾಗೂ ಜನರೇಟರ್ ವ್ಯವಸ್ಥೆಯನ್ನು ಮೆಸ್ಕಾಂ, ತಾಲೂಕು ಪಂಚಾಯಿತಿಯಿಂದ ಮಾಡುವುದಾಗಿ ಘೋಷಣೆ ಮಾಡಲಾಯಿತು. ತೋಟಗಾರಿಕೆ ಇಲಾಖೆಯಿಂದ ಖರ್ಚು ಹೊಂದಿಸುವುದು ಕಷ್ಟ ಎಂಬ ಮಾತು ಬಂದಿದ್ದು, ಜಿಲ್ಲಾಽಕಾರಿಗಳಿಗೆ ಈ ಬಗ್ಗೆ ತಿಳಿಸುವುದಾಗಿ ತಹಸೀಲ್ದಾರ್ ಹೇಳಿದರು. ಯಾರು ಸ್ಪಂದನೆ ನೀಡದಿದ್ದರೂ ತಹಸೀಲ್ದಾರ್ ಆಗಿ ನಾನು ಕಾರ್ಯಕ್ರಮ ಮಾಡುತ್ತೇನೆ ಎಂದರು.