ಮುಡಾದಲ್ಲಿ ಪ್ರತಿ ಮಂಗಳವಾರ ಜನಸ್ಪಂದನ ಕಾರ್ಯಕ್ರಮ: ಯಶಸ್ವಿ ಸೋಮಶೇಖರ್

Yasavi Somashekar
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕೆಲಸಗಳು ಸುಗಮವಾಗಿ ನಡೆಸುವ ಉದ್ದೇಶದಿಂದ ಹಾಗೂ ಸಾರ್ವಜನಿಕರ ಕೆಲಸವನ್ನು ತ್ವರಿತವಾಗಿ ಮಾಡುವ ಸಲುವಾಗಿ ಪ್ರತಿ ಮಂಗಳವಾರ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಯಶಸ್ವಿ ಸೋಮಶೇಖರ್ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಗಮನಿಸಿದಂತೆ ಮುಡಾ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಖಾತೆ ಮಾಡಿಸಿಕೊಳ್ಳಲು, ಕಂದಾಯ ಕಟ್ಟುವ ವಿಷಯದಲ್ಲಿ ತೊಂದರೆಯಾಗುತ್ತಿದೆ. ಅವುಗಳನ್ನು ತಡೆಗಟ್ಟಲು ಮುಂದಿನ ಮಂಗಳವಾರದಿಂದಲೇ ಜನಸ್ಪಂದನ ಕಾರ್ಯಕ್ರಮ ಆರಂಭಿಸಲಾಗುವುದು ಎಂದರು.

ಮುಡಾ ವತಿಯಿಂದ ಸಾರ್ವಜನಿಕರಿಗೆ ನಿವೇಶನ ನೀಡುವ ಉದ್ದೇಶದಿಂದ ಬಡಾವಣೆ ನಿರ್ಮಿಸಲು ಬೊಮ್ಮೇನಳ್ಳಿ ಬಳಿ ರೈತರೊಂದಿಗೆ ಮಾತುಕತೆ ನಡೆಸಿ 50:50 ಅನುಪಾತದಲ್ಲಿ 600 ಎಕರೆ ಭೂಮಿ ಖರೀದಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net