

ತಂದೆಯವರ ಮಾರ್ಗದರ್ಶನ: ತಂದೆಯವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಲು ಹರಿದು ಬಂದ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಕಂಡು ನನಗೆ ಹೆಮ್ಮೆ ಎನಿಸಿತು. ಜನರು ತಂದೆಯವರ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಸಚಿವರ ಪುತ್ರ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ನಿತೀಶ್ ಪುರುಷೋತ್ತಮ್ ಭಾವುಕರಾದರು.
ತಂದೆಯವರ ಹುಟ್ಟುಹಬ್ಬದ ಪ್ರಯುಕ್ತ ಗರುಡಾಚಾರ್‌ಪಾಳ್ಯ ವಾರ್ಡ್‌ನ 6 ಸಾವಿರಕ್ಕೂ ಹೆಚ್ಚು ಬಡಕುಟುಂಬದವರಿಗೆ ಸೀರೆಯೊಂದಿಗೆ ಸಿಹಿ ವಿತರಿಸಲಾಗಿದೆ, ಎಲ್ಲರಿಗೂ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಜನರು ಸಂತಸದಿಂದ ಆಶೀರ್ವದಿಸಿದರೆ ನಮ್ಮ ಕಾರ್ಯವನ್ನು ದೇವರು ಮೆಚ್ಚಿದಂತೆ ಎಂದು ಹೇಳಿದರು. ತಂದೆಯವರ ಮಾರ್ಗದರ್ಶನ ಅವರ ಜನರೊಂದಿಗೆ ನಡೆದುಕೊಳ್ಳುವ ರೀತಿಯೇ ನನಗೆ ಮಾರ್ಗದರ್ಶನವಾಗಿದೆ ಎಂದರು.
ಬೃಹತ್ ಕೇಕ್ ಕತ್ತರಿಸಿ ಶುಭಾಶಯ: