

ಬೈಲಹೊಂಗಲ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮತ್ತು ಅಬಕಾರಿ ಸುಂಕ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಉಪವಿಭಾಗಾ-ಕಾರಿ ಪ್ರಭಾವತಿ ಕೀರಪುರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯ ಕಾರ್ತಿಕ ಪಾಟೀಲ ಮಾತನಾಡಿ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಹಾಗೂ ಅಬಕಾರಿ ಸುಂಕ ಹೆಚ್ಚಳ ಸೇರಿ ಕಳೆದ ಹತ್ತು ವರ್ಷಗಳಲ್ಲಿ ಅನಗತ್ಯವಾಗಿ ಜನರಿಗೆ ಆರ್ಥಿಕ ಹೊರೆ ಹೇರಿದೆ. ಕೇಂದ್ರ ಸರ್ಕಾರದ ದುರಾಡಳಿತದಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಕೂಡಲೇ ಪೆಟ್ರೋಲ್, ಡೀಸೆಲ್ ದರ ಇಳಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಉಮೇಶ ಬೋಳೆತ್ತಿನ, ಯುವ ಬ್ಲಾಕ್ ಕಾಂಗ್ರೆಸ್ ಅಧ್ಯ ಸಮಿ ಮಕಾನದಾರ, ವಿಷ್ಣು ಕಾರಬಾರಿ, ದಾದಾಪೀರ ಜಮಾದಾರ, ಶ್ರೀಕಾಂತ ಸುಂಕದ, ಸುನೀಲ ಹಲಗಿ, ಶಿವು ಹಂಪನ್ನವರ, ಪ್ರವಿಣ ಬೋಡಕಿ, ತಾಜುದ್ದೀನ್ ಶಿಲೇದಾರ, ಉಮೇಶ ಸೋಮಣ್ಣವರ, ಕಾರ್ತಿಕ ನಂಜಪ್ಪನವರ, ಆಯಾಜ್ ತಾಳಿಕೋಟಿ, ಮಡಿವಾಳಪ್ಪ ಅಕ್ಕಿಸಾಗರ, ರಾಜೇಸಾಬ್ ಜಮಾದಾರ, ಅದಂ ನದಾ, ಇಮ್ರಾನ್ ಕಿತ್ತೂರು, ಶಿವು ಸೋಲಬನ್ನವರ, ಜುನೆದ ಕಡಬಿ, ಉಮೇಶ ಹುಂಬಿ, ಮಾಡಿವಾಳಪ್ಪ ಮರಕುಂಬಿ ಇತರರಿದ್ದರು.