ಪಂಪಾ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಜನಾರ್ದನರೆಡ್ಡಿ ಭೇಟಿ

IMG-20221206-WA0015.jpg
Published on

ಗಂಗಾವತಿ(ಕೊಪ್ಪಳ) : ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಇಂದು (ಡಿ.6) ಗಂಗಾವತಿ ನಗರದ ಪಂಪಾವಿರೂಪಾಕ್ಷೇಶ್ವರ ದೇವಾಯಲಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ರಾಜಕೀಯ ರಂಗದಲ್ಲಿ ರೆಡ್ಡಿ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆಂಬ ಮಾತುಗಳು ಹರಿದಾಡುತ್ತಿದ್ದು, ಸೋಮವಾರ ಹನುಮ ಮಾಲೆ ಧರಿಸಿ ಗಮನ ಸೆಳೆದಿದ್ದರು. ಪಂಚವಟಿಯಲ್ಲಿ ವಾಸ್ಯವ್ಯ ಹೂಡಿದ್ದು, ಹಲವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಗಂಗಾವತಿ ನಗರದಲ್ಲಿ ಮನೆ ಖರೀದಿಸಿದ್ದು, ಮುಂದಿನ ಜೀವನ ಇಲ್ಲಿಯೇ ಕಳೆಯುವುದಾಗಿ ಹೇಳಿಕೆ ನೀಡಿದ್ದಾರೆ.

ಇಂದು ಬಿಜೆಪಿ ಕಾರ್ಯಕರ್ತರೊಂದಿಗೆ ಗಂಗಾವತಿ ನಗರ ಸುತ್ತಾಟ ಆರಂಭಿಸಿದ್ದಾರೆ. ಬೆಳಗ್ಗೆಯೇ ಜಂತಕಲ್ ನ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಕೆಲ ಮುಖಂಡರ ಮನೆಗೆ ಭೇಟಿ ನೀಡಲಿದ್ದಾರೆ. ಇದರೊಂದಿಗೆ ಕೆಲ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದು, ರೆಡ್ಡಿ ನಡವಳಿಕೆಗಳು ರಾಜಕೀಯ ಜೀವನಕ್ಕೆ ಮರಳುವ ಲಕ್ಷಣಗಳನ್ನ ದಟ್ಟವಾಗಿಸುತ್ತುದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net