ರಜತ ದ್ವಾರ ಸಮರ್ಪಣೆ

denige
Published on

ಬೆಳ್ತಂಗಡಿ: ಉಜಿರೆ ಶ್ರೀಜನಾರ್ದನ ಸ್ವಾಮಿ ದೇವಸ್ಥಾನದ ದೇವರಗುಡಿಗಳಿಗೆ ರಜತ ದ್ವಾರಸಮರ್ಪಣೆ ಕಾರ್ಯಕ್ರಮ ನಡೆಯಿತು.

ಉಜಿರೆ ಮಹಾಲಕ್ಷ್ಮೀ ಸ್ಟೋರ್ಸ್‌ನ ಭರತ್ ಕುಮಾರ್, ಇಂಜಿನಿಯರ್ ಗಣೇಶ್ ಮತ್ತು ಉಜಿರೆಯ ಕಾಮಧೇನು ಹೋಟೆಲ್‌ನ ಸತೀಶ ಹೊಳ್ಳ ಸಹೋದರರು ಶ್ರೀಜನಾರ್ದನ ಸ್ವಾಮಿ ದೇವರ ಗರ್ಭಗುಡಿಯ ಮಹಾದ್ವಾರಕ್ಕೆ ಕಲಾತ್ಮಕ ಕೆತ್ತನೆಯ ರಜತ ಹೊದಿಕೆ ಸಮರ್ಪಿಸಿದರು.

ಉದ್ಯಮಿ ರವಿ ಚೆಕ್ಕಿತ್ತಾಯ ಶ್ರೀಈಶ್ವರ ದೇವರ ಗುಡಿಗೆ ಮತ್ತು ಉಜಿರೆ ಇಂಡಿಯನ್ ಅರ್ಥ್ ಮೂವರ್ಸ್‌ನ ರಾಘವೇಂದ್ರ ಬೈಪಾಡಿತ್ತಾಯ ಅವರು ಶ್ರೀಅಮ್ಮನವರ ಗುಡಿಗೆ ಕುಸುರಿ ಕೆಲಸದಿಂದ ಶೋಭಿಸುವ ಹಿತ್ತಾಳೆ ಹೊದಿಕೆ ಸಮರ್ಪಿಸಿದರು.

ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಶರತ್‌ಕೃಷ್ಣ ಪಡುವೆಟ್ನಾಯ, ರಾಘವೇಂದ್ರ ಬೈಪಾಡಿತ್ತಾಯ ಕುಟುಂಬಸ್ಥರು, ರವಿ ಚಕ್ಕಿತ್ತಾಯ ಮತ್ತು ಕುಟುಂಬಸ್ಥರು, ಸತೀಶ್ ಹೊಳ್ಳ ಸಹೋದರರು ಮತ್ತು ಕುಟುಂಬಸ್ಥರು, ಭರತ್ ಕುಮಾರ್ ಮತ್ತು ಕುಟುಂಬಸ್ಥರು, ಗಣೇಶ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ಅರ್ಚಕ ಶ್ರೀನಿವಾಸ ಹೊಳ್ಳ ಮತ್ತು ರಾಮಚಂದ್ರ ಹೊಳ್ಳರು ದೇವರಿಗೆ ಪೂಜಾ ಕಾರ್ಯ ನೆರವೇರಿಸಿ ಸೇವಾರ್ಥಿಗಳಿಗೆ ಪ್ರಸಾದ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net