

ಮಂಗಳೂರು : ನಗರದ ಪಡೀಲ್‌ನಲ್ಲಿ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭ ಸೆ.29ರಂದು ಸಾಯಂಕಾಲ 4ಕ್ಕೆ ನಡೆಯಲಿದೆ.
ಆಸ್ಪತ್ರೆಯ ಉದ್ಘಾಟನೆಯನ್ನು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ನೆರವೇರಿಸಲಿದ್ದಾರೆ. ಆಸ್ಪತ್ರೆಯ ವಿಶೇಷ ವಿಭಾಗವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್‌ಪ್ರಕಾಶ್ ರುದ್ರಪ್ಪ ಪಾಟೀಲ್ ಉದ್ಘಾಟಿಸಲಿದ್ದಾರೆ. ಶಾಸಕ ಡಿ. ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ , ಕಾಸರಗೋಡು ಸಂಸದ ರಾಜಮೋಹನ್ ಉನ್ನಿತ್ತಾನ್, ಹಾಸನ ಸಂಸದ ಶ್ರೇಯಸ್ ಪಾಟೀಲ್ , ಶಾಸಕರಾದ ಎಚ್. ಡಿ ರೇವಣ್ಣ, ಅಶೋಕ್ ಕುಮಾರ್ ರೈ , ರಾಜೇಶ್ ನಾಕ್ , ಎ.ಕೆ.ಎಂ.ಅಶ್ರಫ್,
ಎನ್.ಎ.ನೆಲ್ಲಿಕುನ್ನು , ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಬಿ.ಎಂ.ಫಾರೂಕ್, ಕರ್ನಾಟಕ ರಾಜ್ಯ ಅಲೈಡ್ ಹೆಲ್ತ್ ಕೇರ್ ಕೌನ್ಸಿಲ್‌ನ ಚೇರ್ಮನ್ ಯು.ಟಿ.ಇಫ್ತಿಕಾರ್ ಅಲಿ , ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, .ಎಂ ಇಬ್ರಾಹಿಂ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. . ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಚೇರ್ಮನ್ ಡಾ. ಅಬ್ದುಲ್
ಬಶೀರ್ ವಿ.ಕೆ. ಮತ್ತು ನಿರ್ದೇಶಕರು ಉಪಸ್ಥಿತರಿರುವರು.
* ನುರಿತ ವೈದ್ಯಕೀಯ ತಂಡ
ಡಾ. ಅಬ್ದುಲ್ ಬಶೀರ್ ವಿ.ಕೆ. ಇವರ ನೇತೃತ್ವದ ಜನಪ್ರಿಯ ಸಮೂಹ ಸಂಸ್ಥೆ ಅಧೀನದಲ್ಲಿ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯ ನಿರ್ವಹಿಸಲಿದ್ದು, ಎಲ್ಲ ಆರೋಗ್ಯ ಸಮಸ್ಯೆಗಳಿಗೆ ತುರ್ತು ಪರಿಹಾರ ಒದಗಿಸಲು ನುರಿತ ವೈದ್ಯಕೀಯ ತಜ್ಞರು ಸಿದ್ದರಾಗಿದ್ದಾರೆ. ಕರ್ನಾಟಕದ ವೈದ್ಯಕೀಯ ಕ್ಷೇತ್ರದಲ್ಲಿ ಮತ್ತು ವಿಶ್ವ ದರ್ಜೆಯ ವೈದ್ಯಕೀಯ ಸೇವೆಗಳೊಂದಿಗೆ ರೋಗಿಗಳ ಆರೈಕೆಯನ್ನು ಮಾಡಲು ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಿದ್ಧಗೊಂಡಿದೆ . 130 ಬೆಡ್ ವ್ಯವಸ್ಥೆಯನ್ನು ಹೊಂದಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದಾಗಿದ್ದು, ಪರಿಣಿತ ವೈದ್ಯರಿಂದ ದಿನದ 24 ಗಂಟೆ ಸೇವೆಗಳು ಲಭ್ಯವಾಗಲಿದೆ. 24 ಗಂಟೆಗಳ ಕಾಲ ತುರ್ತು ಚಿಕಿತ್ಸಾ ವಿಭಾಗ ಕಾರ್ಯಚರಿಸಲಿದೆ.
* ಬರ್ತ್ ಅಂಡ್ ಬ್ಲೂಂ ವಿಶೇಷ ವಿಭಾಗ
ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶೇಷವಾದ ಬರ್ತ್ ಬ್ಲೂಂ ವಿಭಾಗವಿದೆ. ಇದರಲ್ಲಿ 24 ಗಂಟೆಗಳ ಕಾಲ ಸೇವೆ ಲಭ್ಯವಿರಲಿದೆ. ಸಹಜ ಹೆರಿಗೆ, ಶಸ್ತ್ರಚಿಕಿತ್ಸೆ, ಎನ್‌ಐಸಿಯು ಸೌಲಭ್ಯವಿದ್ದು, ತಾಯಿ-ಮಗುವಿನ ಉತ್ತಮ ಆರೈಕೆಗೆ ವ್ಯವಸ್ಥೆಯಿದೆ.
*ವಿವಿಧ ವಿಭಾಗಗಳ ಸೇವೆಗಳು
ಜನರಲ್ ಮೆಡಿಸಿನ್, ಯುರೋಲಜಿ, ಆರ್ಥೋ, ಡರ್ಮಟಾಲಜಿ, ಪಲ್ಮನಾಲಜಿ, ಕಾರ್ಡಿಯೋಲಜಿ, ನ್ಯೂರೋಲಜಿ, ಹೆಮ್ಟಾಲಜಿ, ಗ್ಯಾಸ್ಟ್ರೋಂಟಾಲಜಿ, ಗೈನಾಕಾಲಜಿ, ರೇಡಿಯಾಲಜಿ, ನೆಫ್ರಾಲಜಿ, ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಪ್ಲಾಂಟೇಷನ್, ಡಯಾಬಿಟಿಕ್ ಕ್ಲಿನಿಕ್, ಕ್ರಿಟಿಕಲ್ ಕೇರ್, ಗ್ಯಾಸೊ್ಟ್ರೀೀಂಟಾಲಜಿ ಸೆಂಟರ್, ಫಿಸಿಯೋಥೆರಪಿ, ಹೈಟೆಕ್ ಲ್ಯಾಬೋರೇಟರಿ, ಮನೆ ಬಾಗಿಲಿಗೆ ಲ್ಯಾಬ್ ಸ್ಪೆಷಲಿಟಿ, ಎಕ್ಸ್ ರೇ, ಸಿಟಿ ಸ್ಕ್ಯಾನ್, ಇಎನ್‌ಟಿ, ಡೇ ಕೇರ್, ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತೆ ವಿವಿಧ ಸೇವೆಗಳು ಲಭ್ಯವಾಗಲಿವೆ.
*ಸರ್ಕಾರಿ ಮತ್ತು ಖಾಸಗಿ ಸ್ಕೀಂ ವ್ಯವಸ್ಥೆ
ಜನಪ್ರಿಯ ಆಸ್ಪತ್ರೆ ಬಡ ರೋಗಿಗಳಿಗೆ ಸಹಾಯವಾಗುವ ದೃಷ್ಟಿಯಿಂದ ಎಲ್ಲ ರೀತಿಯ ಸರ್ಕಾರಿ ಮತ್ತು ಖಾಸಗಿ ಸ್ಕೀಂಗಳು, ಇನ್ಸ್ಯೂರೆನ್ಸ್‌ಗಳ ಸವಲತ್ತುಗಳನ್ನು ನೀಡಲಿದೆ. ಜನಪ್ರಿಯ ಫೌಂಡೇಶನ್ ಭಾಗವಾಗಿರುವ ಹಾಸನದ ಜನಪ್ರಿಯ ಆಸ್ಪತ್ರೆಯು ಅತಿ ಹೆಚ್ಚು ಸರ್ಕಾರಿ ಸ್ಕೀಂ ಸೌಲಭ್ಯಗಳನ್ನು ನೀಡಿರುವ ಸಂಸ್ಥೆ ಎಂಬ ಹೆಸರು ಗಳಿಸಿಕೊಂಡಿದೆ ಎಂದು ಆಸ್ಪತ್ರೆಯ ನಿರ್ದೇಶಕರು ಮತ್ತು ಸಿಇಒ ಡಾ. ಕಿರಾಶ್ ಪರ್ತಿಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.