ಗಂಗಾಧರ್ ಬೈರಾಪಟ್ಟಣ ರಾಮನಗರ
ರಾಜ್ಯದ ಜನಪದ ಕ್ಷೇತ್ರದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕರ್ನಾಟಕ ಜಾನಪದ ಪರಿಷತ್ನ ನೂತನ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿದೆ.
ಸುಮಾರು ಮೂರು ದಶಕಗಳ ಇತಿಹಾಸ ಹೊಂದಿರುವ ನಾಡೋಜ ಎಚ್. ಎಲ್. ನಾಗೇಗೌಡರ ಕನಸಿನ ಕೂಸು ರಾಮನಗರ ಬಳಿಯ ಜಾನಪದ ಲೋಕದ ಅಧ್ಯಕ್ಷರಾಗಿದ್ದ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಸಮರ್ಥ ಸಾರಥಿಯ ಹುಡುಕಾಟ ನಡೆದಿದೆ. ಆದರೆ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಗೊಂದಲ ಉಂಟಾಗಿ ಒಂದು ತಿಂಗಳಿಂದ ಅಧ್ಯಕ್ಷ ಸ್ಥಾನ ಖಾಲಿಯೇ ಉಳಿದಿದೆ.
ಐಎಎಸ್'ಗೆ ವಿರೋಧ
ಲಭ್ಯ ಮಾಹಿತಿ ಪ್ರಕಾರ ತಿಮ್ಮೇಗೌಡರ ರಾಜೀನಾಮೆ ನಂತರ ಅಧ್ಯಕ್ಷ ಸ್ಥಾನವನ್ನು ಮತ್ತೊಬ್ಬ ಐಎಎಸ್ ಅಧಿಕಾರಿಯೇ ತುಂಬಬೇಕು ಎನ್ನುವ ಇರಾದೆಯಿಂದ ಈ ಸ್ಥಾನಕ್ಕೆ ನಿವೃತ್ತ ಅಧಿಕಾರಿಗಳಾದ ಶಂಕರಲಿಂಗೇಗೌಡ, ವಿಠ್ಠಲಮೂರ್ತಿ ಅವರನ್ನು ತರುವ ನಿಟ್ಟಿನಲ್ಲಿ ಪ್ರಯತ್ನ ನಡೆದು ಯಶಸ್ವಿ ಆಗಲಿಲ್ಲ ಎನ್ನಲಾಗಿದೆ. ಆದರೆ, ಇದಕ್ಕೆ ಜಾನಪದ ಹಿನ್ನೆಲೆ ಹೊಂದಿರುವ ಟ್ರಸ್ಟ್ನ ಸದಸ್ಯರಿಂದ ವಿರೋಧ ವ್ಯಕ್ತವಾಗಿದ್ದು, ಜಾನಪದ ಹಿನ್ನೆಲೆ ಉಳ್ಳವರನ್ನೇ ಅಧ್ಯಕ್ಷರನ್ನಾಗಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕಾಗಿಯೇ ಟ್ರಸ್ಟ್ನ ಹಿರಿಯ ಸದಸ್ಯರೂ ಆದ ಪ್ರೊ. ಹಿ.ಶಿ. ರಾಮಚಂದ್ರೇಗೌಡ, ಕರ್ನಾಟಕ ಸಂದ ಪ್ರೊ. ಜಯಪ್ರಕಾಶ್ಗೌಡ ರಾಜೀನಾಮೆ ನೀಡಿದ್ದಾರೆ. ಮತ್ತೊಂದೆಡೆ ಜಾನಪದ ವಿದ್ವಾಂಸ ಡಾ. ಹಿ.ಚಿ. ಬೋರಲಿಂಗಯ್ಯ ಅವರನ್ನು ಅಧ್ಯಕ್ಷರನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದೂ ತಿಳಿದುಬಂದಿದೆಯಾದರೂ, ವಿದೇಶದಲ್ಲಿರುವ ಬೋರಲಿಂಗಯ್ಯ ಅವರು ಹುದ್ದೆ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಾನಪದ ಬೆಳೆಯಬೇಕು
ಜಾನಪದ ಕಲೆ ಮತ್ತು ಕಲಾವಿದರು ಉಳಿಯಬೇಕು. ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕು. ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷರ ಆಯ್ಕೆ ಹಿಂದೆ ಕಲೆ ಮತ್ತು ಕಲಾವಿದರ ಬಗೆಗಿನ ಕಾಳಜಿಯೇ ಮುಖ್ಯವಾಗಬೇಕಿದೆ. ನೂತನ ಅಧ್ಯಕ್ಷರಿಗೆ ಜಾನಪದದ ಬಗ್ಗೆ ಜ್ಞಾನವಿದ್ದರೆ ಮಾತ್ರ ಇದು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ನ ಆಡಳಿತ ಮಂಡಳಿ ನಿರ್ಧಾರ ಮಾಡಬೇಕಿದೆ.
ಮೂರು ದಶಕದ ಇತಿಹಾಸ
ಐಎಎಸ್ ಅಧಿಕಾರಿಯಾಗಿದ್ದ ನಾಡೋಜ ಎಚ್.ಎಲ್.ನಾಗೇಗೌಡರ ಕನಸಿನ ಲವಾಗಿ ಹುಟ್ಟಿಕೊಂಡ ಜಾನಪದ ಲೋಕ, ಈಗ ನಾಡಿನ ಜಾನಪದ ಕಾಶಿಯಂತಾಗಿದೆ. ನಾಗೇಗೌಡರು, ಸರ್ಕಾರ ನೀಡಿದ ಕುರುಚಲು ಕಾಡಿನ ಜಾಗದಲ್ಲಿಯೇ ನೆಟ್ಟು ನೀರೆರದ ಜಾನಪದ ಎನ್ನುವ ಗಿಡವೊಂದು ಹೆಮ್ಮರವಾಗಿ ಬೆಳೆದು ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಿಕೊಂಡಿದೆ. ಜಾನಪದ ಎಂದರೆ ಹಳ್ಳಿಗೆ ಸೀಮಿತವಾಗಿದ್ದ ಕಾಲವದು. ಐಎಎಸ್ ಅಧಿಕಾರಿಯಾಗಿ ನಾಡು ಸುತ್ತಿದ್ದ ನಾಗೇಗೌಡರು ಜಾನಪದವನ್ನು ಉಳಿಸಿ, ಬೆಳೆಸಿ ಎಲ್ಲೆಡೆ ಪಸರಿಸುವ ಕನಸು ಕಂಡರು. ನಾಡಿನ ಉದ್ದಗಲಕ್ಕೂ ಸುತ್ತಿ ಸಾವಿರಾರು ಕಲಾವಿದರು, ಕಲೆಯ ಮಾಹಿತಿ ಕಲೆ ಹಾಕಿದರು. ಇದರೊಟ್ಟಿಗೆ ಯಾರಿಗೂ ಬೇಡವಾಗಿ ಮಣ್ಣಾಗುತ್ತಿದ್ದ ಜನಪದರು ದಿನನಿತ್ಯ ಬಳಕೆ ಮಾಡುತ್ತಿದ್ದ ವಸ್ತುಗಳನ್ನು ಸಂಗ್ರಹಿಸಿದರು. 1994ರಲ್ಲಿ ಲೋಕಾರ್ಪಣೆಗೊಂಡ ಜಾನಪದ ಲೋಕ, 15 ಎಕರೆ ವಿಸ್ತಾರವಾದ ಸುಂದರ ಲೋಕವಾಗಿದೆ. ಇಲ್ಲಿ ಬೀದರ್ನಿಂದ ಚಾಮರಾಜನಗರವರೆಗೆ, ಕಾರವಾರದಿಂದ&ರಾಯಚೂರುವರೆಗೆ ರಾಜ್ಯದ ನಾಲ್ಕೂ ದಿಕ್ಕುಗಳಿಂದ, ಮಲೆನಾಡು, ಬಯಲು ಸೀಮೆ, ಅರೆ ಮಲೆನಾಡುಗಳಿಂದ ಹೆಕ್ಕಿ ತೆಗೆದ ಜನಪದರು ಬಳಕೆ ಮಾಡುತ್ತಿದ್ದ ವಸ್ತುಗಳ ಸಾಲು ಸಾಲು ಜಾನಪದ ಲೋಕದ ಸಿರಿವಂತಿಕೆಯನ್ನು ಹೆಚ್ಚಿಸಿದೆ.
ಗಣ್ಯರ ದಂಡೇ ಭೇಟಿ ನೀಡಿದೆ
ಜಾನಪದ ಲೋಕದ ಹಿರಿಮೆ ಮತ್ತು ಗರಿಮೆ ವಿಶ್ವ ವ್ಯಾಪಿಯಾಗಿದೆ. ಇಲ್ಲಿಗೆ ಬರುವ ವಿದೇಶಿಗರ ಸಂಖ್ಯೆಗೇನೂ ಕಡಿಮೆ ಇಲ್ಲ. ವೀರೇಂದ್ರ ಪಾಟೀಲರಿಂದ ಬಿ.ಎಸ್.ಯಡಿಯೂರಪ್ಪ ಅವರವರೆಗೂ ಬಹುತೇಕ ಮುಖ್ಯಮಂತ್ರಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ. ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಅವರ ಪತ್ನಿ ಸಲ್ಮಾ ಅನ್ಸಾರಿ, ಕೇಂದ್ರ ಸಚಿವೆಯಾಗಿದ್ದ ಮನೇಕಾ ಗಾಂಧಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹೀಗೆ ಹತ್ತು ಹಲವು ಮಹನೀಯರು ಭೇಟಿ ನೀಡಿ ಇಲ್ಲಿನ ಸಂಗ್ರಹ ಮತ್ತು ಸೌಂದರ್ಯವನ್ನು ಕಂಡು ಮನಸೋತಿದ್ದಾರೆ. ಜತೆಗೆ ಪ್ರತಿ ವರ್ಷ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಜಾನಪದ ಲೋಕದ ಪ್ರಸಿದ್ಧಿಗೆ ಸಾಕ್ಷಿಯಾಗಿದೆ.
ಬೋರ್ಡ್ ಮೀಟಿಂಗ್ ಇದ್ದು, ಶ್ರೀವೇ ಅಧ್ಯಕ್ಷರ ಆಯ್ಕೆಯಾಗಲಿದೆ. ಯಾರಾಗಲಿದ್ದಾರೆ ಎಂದು ಹೇಳಲು ಆಗದು. ಸಭೆಯಲ್ಲಿ ತೀರ್ಮಾನ ಮಾಡಲಾಗುವುದು. ರಾಮಚಂದ್ರೇಗೌಡರು ಮತ್ತು ಜಯಪ್ರಕಾಶ್ಗೌಡರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.
ಆದಿತ್ಯ ನಂಜರಾಜ್, ಮ್ಯಾನೇಜಿಂಗ್ ಟ್ರಸ್ಟಿ, ಜಾನಪದ ಪರಿಷತ್
ಜಾನಪದ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಐಎಎಸ್ ಅಧಿಕಾರಿಗಳನ್ನು ತರಬಾರದು ಎನ್ನುವುದು ನನ್ನ ನಿಲುವು. ಇದಕ್ಕಾಗಿ ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.
ಪ್ರೊ. ಹಿ.ಶಿ. ರಾಮಚಂದ್ರೇಗೌಡ, ಜಾನಪದ ವಿದ್ವಾಂಸ