

ಉಡುಪಿ: ಕಲೆಯನ್ನು ನಾನು ಅಪ್ಪಿಕೊಳ್ಳುತ್ತಿಲ್ಲ. ಕಲೆಗಳೇ ನನ್ನನ್ನು ಅಪ್ಪಿಕೊಳ್ಳುತ್ತಿದ್ದು, ಇದು ನನ್ನ ಪೂರ್ವಜನ್ಮದ ಪುಣ್ಯವೇ ಇರಬಹುದು. ದೇಶದಲ್ಲಿ ಅನೇಕ ಕಲಾಪ್ರಕಾರಗಳಿದ್ದು, ವಿನಾಶದ ಅಂಚಿನಲ್ಲಿವೆ. ಅವುಗಳನ್ನು ಉಳಿಸುವ ಆಶಯ, ಪ್ರಯತ್ನ ನನ್ನದಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಉಡುಪಿ ಅಂಬಲಪಾಡಿಯ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದಲ್ಲಿ ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಟಕ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಆಶ್ರಯದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಉಡುಪಿ ಶ್ರೀರಾಮ ಜಾನಪದ ಕಲಾತಂಡದ ಜಾನಪದ ವೈಭವ(ನಾಡಿನ ಜಾನಪದ ಕಲೆಗಳ ಅನಾವರಣ) ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಣಿತ ಭಜನೆಯೂ ಉಳಿಯುವಂತಾಗಬೇಕು. ಹಣವಿದೆಯೆಂದು ಖರ್ಚು ಮಾಡುತ್ತಿಲ್ಲ. ಕಲೆ ಹಾಗೂ ಕಲಾವಿದರನ್ನು ಗೌರವಿಸಿ, ಉಳಿಸಲು ಅನೇಕರ ಆರ್ಥಿಕ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಿ ಸಂಸತಿ ಬೆಳೆಸುವ ಕಾರ್ಯ ಮಾಡುತ್ತಿದ್ದೇನೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಅಂಬಲಪಾಡಿಯ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್, ಜಾನಪದ ಕಲೆಯೆಂದರೆ ಅದೇನೋ ಸೆಳೆತ. ಅದು ಜನರ ನರ-ನಾಡಿಗಳಲ್ಲಿಯೇ ಇದ್ದು, ನಮ್ಮ ದೇಶೀಯ ಸಂಸತಿಯ ಪ್ರತಿಕವಾಗಿದೆ. ಅದು ದೊಡ್ಡ ಸಂಪತ್ತಾಗಿದ್ದು ಸರಿಯಾದ ಸ್ಥಾನಮಾನ ಸಿಗುವಂತಾಗಬೇಕು ಎಂದು ಹೇಳಿದರು.
ಜನರ ನಿತ್ಯದ ಜೀವನ ಪದ್ಧತಿಯನ್ನು ಪದ್ಯ, ನೃತ್ಯದ ಮೂಲಕ ಹೇಳಿಕೊಂಡು ಬಂದ ಸಂಪ್ರದಾಯವಿದು. ಹೀಗಾಗಿ ನಮ್ಮತನಕ್ಕೂ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿರುವ ತಲ್ಲೂರು ಶಿವರಾಮ ಶೆಟ್ಟಿ ಅವರು ಅಭಿನಂದನಾರ್ಹರು ಎಂದರು.
ಜಿಲ್ಲಾ ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ದೇಶದಲ್ಲಿ ಎಷ್ಟು ಭಾಷೆಗಳಿವೆಯೋ ಅಷ್ಟು ಜಾನಪದ ಸಂಸತಿಗಳಿವೆ. ಅವುಗಳಲ್ಲಿ ತುಳುನಾಡಿನ ಜಾನಪದ ವಿಶಿಷ್ಟತೆಯಿಂದ ಕೂಡಿದೆ. ಹಿಂದಿನವರಿಗೆ ಶಿಕ್ಷಣ ಇರಲಿಲ್ಲ, ಸಂಸತಿಯಿತ್ತು. ಆದರೆ, ಇಂದಿನವರಿಗೆ ಶಿಕ್ಷಣವಿದೆ, ಸಂಸತಿಯಿಲ್ಲ. ಆಧುನೀಕರಣದ ಹೆಸರಲ್ಲಿ ಜನಪದ ಸೊಗಡು ನಶಿಸಬಾರದು. ಎಲ್ಲರೂ ಈ ಕಲೆ ಉಳಿಸಲು ಕೈಜೋಡಿಸಬೇಕು ಎಂದರು.
ಪ್ರಶಸ್ತಿ ಪ್ರದಾನ
ಯಕ್ಷಗಾನ ಕಲಾವಿದ ಕೆ.ಜೆ.ಗಣೇಶ ಆಚಾರ್ಯ ಅವರಿಗೆ "ತಲ್ಲೂರ್ಸ್ ಜಾನಪದ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಅನೂಷಾ ಆಚಾರ್ಯ ಪ್ರಶಸ್ತಿ ಪತ್ರ ವಾಚಿಸಿದರು. ಉಡುಪಿ ಯಕ್ಷಗಾನ ಕಲಾರಂಗದ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರು, ರಂಗಭೂಮಿ ಉಡುಪಿಯ ಪ್ರಧಾನ ಕಾರ್ಯದರ್ಶಿ ಪ್ರದಿಪಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು. ಪ್ರಶಾಂತ ಬಿರ್ಲೆ ಪ್ರಾರ್ಥಿಸಿದರು. ಕರ್ನಾಟಕ ಜಾನಪದ ಪರಿಷತ್ನ ಉಡುಪಿ ತಾಲೂಕು ಘಟಕದ ಅಧ್ಯಕ್ಷ ಸುನೀಲಕುಮಾರ್ ಶೆಟ್ಟಿ ಸ್ವಾಗತಿಸಿದರು. ಜಾನಪದ ಪರಿಷತ್ನ ಖಜಾಂಚಿ ಪ್ರಶಾಂತ ಭಂಡಾರಿ ವಂದಿಸಿದರು. ಪರಿಷತ್ನ ಕಾರ್ಯದರ್ಶಿ ರವಿರಾಜ ನಾಯಕ್ ಕಾರ್ಯಕ್ರಮ ನಿರೂಪಿಸಿದರು.