‘ಜಾನಪದ ಜಂಗಮ’ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ

mysore
Published on

ಮೈಸೂರು: ದಲಿತ ಅಭಿವೃದ್ಧಿ ಸಂಘ ಹಾಗೂ ಧನ್ವಂತ್ರಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಮಾರಿಯಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ಜೆ.ಪಿ.ನಗರದ ನವೋದಯ ಬಡಾವಣೆಯಲ್ಲಿ ಸೋಮವಾರ ರಾತ್ರಿ ವಿಜೃಂಭಣೆಯಿಂದ ‘ಜಾನಪದ ಜಂಗಮ’ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.


ನಾಲ್ವಡಿ ಕೃಷ್ಣರಾಜ ಒಡೆಯರ್ ನಗಾರಿ ಮತ್ತು ತಮಟೆ ಸಾಂಸ್ಕೃತಿಕ ಕಲಾವೃಂದ ವತಿಯಿಂದ ಜಾನಪದ ಕಲಾತಂಡಗಳ ಅದ್ದೂರಿ ಮೆರವಣಿಗೆ ನಡೆಯಿತು.


ಹೆಗ್ಗೋಡಿನ ಮಹಿಳಾ ಡೊಳ್ಳು, ನಗರದ ತಮಟೆ, ಗಾರುಡಿ ಗೊಂಬೆ, ನಗಾರಿ, ಸೋಮನ ಕುಣಿತ ಹಾಗೂ ಕೀಲು ಕುದುರೆ ತಂಡಗಳು ಭಾಗವಹಿಸಿದ್ದವು.

ಕಲಾವೃಂದ ಸಂಸ್ಥೆಯ ಅಧ್ಯಕ್ಷ ರಾಜಣ್ಣ ಹಾಗೂ ಪದಾಧಿಕಾರಿಗಳು, ನವೋದಯ ಬಡಾವಣೆಯ ಯಜಮಾನರು ಇನ್ನಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net