ಮಂಡ್ಯದಲ್ಲಿ ಮತ್ತೆ ಮೇಳೈಸಿದೆ ಜಾನಪದ: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಸಂತಸ

JD
Published on

ಮಂಡ್ಯ: ಮಂಡ್ಯ ನೆಲದಲ್ಲಿ ಮತ್ತೆ ಜಾನಪದ ಸೊಗಡು ಮೇಳೈಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್‌ನ ಜಿಲ್ಲಾ ಹಾಗೂ ಮಂಡ್ಯ ತಾಲೂಕು ಘಟಕದಿಂದ ಸೋಮವಾರ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಸಮೂಹ ಜಾನಪದ ಗೀತೆ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಜಾನಪದ ಸೊಗಡನ್ನು ಶಾಲಾ-ಕಾಲೇಜಿನ ಯುವ ಸಮುದಾಯದತ್ತ ಸಾಗಿಸುತ್ತಿರುವುದು ಒಳ್ಳೆಯ ವಿಚಾರ. ಇಂದಿನ ಸ್ಪರ್ಧೆಗೆ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಯುವ ಸಮುದಾಯದತ್ತ ಜಾನಪದ ಕಲೆಗಳನ್ನು ಕೊಂಡೊಯ್ಯುವ ಕಾರ್ಯ ಮೆಚ್ಚುವಂತದ್ದು, ಜಾನಪದವನ್ನು ಉಳಿಸಿ ಬೆಳಸಲು ಸಂಕಲ್ಪ ಕೈಗೊಂಡಿರುವುದಕ್ಕೆ ನಾವು ಕೂಡ ಸಹಕಾರ ನೀಡುತ್ತೇವೆ ಎಂದರು.
ಕೃಷಿಕ ಲಯನ್ಸ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ.ಹನುಮಂತು, ಜಿಲ್ಲಾ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ನಾಗರಾಜು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಯುವ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ, ಹಿರಿಯ ಕಲಾವಿದ ದಂಸಣ್ಣ, ಪರಿಷತ್‌ನ ಗೌರಾಧ್ಯಕ್ಷ ಕೆಂಚೇಗೌಡ, ಖಚಾಂಚಿ ಸಂಪಹಳ್ಳಿ ಬಸವರಾಜು, ಸದಾಶಿವಮೂರ್ತಿ, ಕಾರಸವಾಡಿ ಮಹದೇವು, ಡಿ.ದೇವರಾಜ್‌ಕೊಪ್ಪ, ಎನ್.ಶೇಖರ್ ಹನಿಯಂಬಾಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net