ಕರುನಾಡಿನಲ್ಲಿ ಜನಪದ ಸದಾ ಜೀವಂತ

JANAPADA
Published on

ಮುಂಡರಗಿ: ಜನಪದ ಮೂಲಕ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಲು ಸಾಧ್ಯ. ಕೋಲಾಟ, ಲಾವಣಿ, ಹಂತಿ, ಸೋಬಾನ ಪದಗಳಂತಹ ಕಲೆಗಳು ಜನಪದಕ್ಕೆ ಮುಕುಟ ಮಣಿಗಳಿದ್ದಂತೆ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಲಲಿತಾ ಹೊಸಮನಿ ಹೇಳಿದರು.

ತಾಲೂಕಿನ ಮಕ್ತುಂಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶ್ರೀ ರತ್ನಾಕರ ಸಾಂಸ್ಕೃತಿಕ ಕಲಾ ಹಾಗೂ ಗ್ರಾಮೀಣ ನಗರ/ಅಭಿವೃದ್ಧಿ ಶಿಕ್ಷಣ ಸಂಸ್ಥೆ ಹಾಗೂ ಗದಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಬುಧವಾರ ಏರ್ಪಡಿಸಿದ್ದ ಜನಪದ ವೈವಿಧ್ಯಮಯ ಸಂಗೀತ, ನೃತ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಂಗಭೂಮಿ ಹಿರಿಯ ಕಲಾವಿದ ಮಳ್ಳಪ್ಪ ಗುಡಿಸಲಮನಿ ಮಾತನಾಡಿ, ಕರುನಾಡು ಐತಿಹಾಸಿಕ, ಸಾಂಸ್ಕೃತಿಕ, ಸಾಹಿತ್ಯ, ಭವ್ಯ ಪ್ರಾಚೀನ ಕಲೆಗಳ ತವರೂರಾಗಿದೆ. ಜನಪದ ಇಂದಿಗೂ ಜನಮನದಲ್ಲಿ ಜೀವಂತವಾಗಿದೆ ಎಂದರು.

ಶಾಲಾ ಭೂ ದಾನಿ ಶಿರಸಮ್ಮ ಪೂಜಾರ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹನಮಂತ ವಾಲಿಕಾರ ಅದ್ಯಕ್ಷತೆ ವಹಿಸಿದ್ದರು. ಜನಪದ ಸಂಗೀತ ಕಾರ್ಯಕ್ರಮ ಹಾಗೂ ಕೃಷ್ಣ-ಸುಧಾಮ ನಾಟಕ, ನೃತ್ಯ ರೂಪಕ ಹಾಗೂ ಸುಗಮ ಸಂಗೀತ ಪ್ರೇಕ್ಷಕರ ಮನಸೂರೆಗೊಂಡವು. ಕಲ್ಪವೃಕ್ಷ ವಿವಿಧೋದ್ದೇಶಗಳ ಸೇವಾ ಫೌಂಡೇಶನ್ ಟ್ರಸ್ಟ್ ಕಲಾತಂಡದ ಕಲಾವಿದರು ಸಂಗೀತ ಕಾರ್ಯಕ್ರಮ ನೆರವೇಸಿದರು. ರಾಮಣ್ಣ ತಿಪ್ಪಣ್ಣವರ ಹಾರ್ಮೋನಿಯಂ ಹಾಗೂ ಶಂಕ್ರಪ್ಪ ಬಡಿಗೇರ ತಬಲಾ ಸಾಥ್ ನೀಡಿದರು.

ದೇವು ಹಡಪದ, ದಾಕ್ಷಾಯಿಣಿ ವಾಲಿಕಾರ, ರತ್ನವ್ವ ದೊಡ್ಡಪ್ಪನವರ, ಈರವ್ವ ವಾಲಿಕಾರ, ಬಸವ್ವ ಹಳ್ಳಿಕೇರಿ ಇತರರು ಇದ್ದರು. ಶಿವು ವಾಲಿಕಾರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net