ನ.9ರಂದು ವೀರಭೂಮಿ ಜನಪದ ಗ್ರಾಮದಲ್ಲಿ ಹಿ.ಚಿ. ಹಬ್ಬ

janapada
Published on

ಕುಶಾಲನಗರ:

ಜನಪದ ಸಿರಿ ಕನ್ನಡ ಸಂಸ್ಥೆ ವತಿಯಿಂದ ಕುಶಾಲನಗರದ ವೀರಭೂಮಿ ಜನಪದ ಗ್ರಾಮದಲ್ಲಿ ನ.9ರಂದು ಹಿ.ಚಿ. ಹಬ್ಬ ಮತ್ತು ಜನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಕರ್ನಾಟಕ ಜಾನಪದ ಕಲೆಗಳ ಮತ್ತು ಕಲಾವಿದರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಜರಗನಹಳ್ಳಿ ಕಾಂತರಾಜು ತಿಳಿಸಿದ್ದಾರೆ.

ಅಂದು ಮಧ್ಯಾಹ್ನ 2 ಗಂಟೆಯಿAದ ಕಾರ್ಯಕ್ರಮ ಆರಂಭವಾಗಲಿದ್ದು, ಜಾನಪದ ಕಲಾವಿದರಿಗೆ ಉತ್ತಮ ವೇದಿಕೆ ಒದಗಿಸುವ ಉದ್ದೇಶದಿಂದ ಆಯೋಜಿಸಲಾಗಿದೆ. ಬುಡಕಟ್ಟು ಜನರ ಜಾನಪದವನ್ನು ಜನರಿಗೆ ತಲುಪಿಸಿದವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಯಾದ ಡಾ. ಹಿ.ಚಿ. ಬೋರಲಿಂಗಯ್ಯ ಅವರು. ಇಂದಿನAತೆ ಸಾಮಾಜಿಕ ಮಾಧ್ಯಮಗಳು, ವಾಹನ ಸೌಕರ್ಯಗಳು ಇಲ್ಲದಿದ್ದ ದಿನಗಳಲ್ಲೇ ಬೆಟ್ಟ, ಗುಡ್ಡಗಳಲ್ಲಿ ಸುತ್ತಾಡಿ ಈ ನೆಲದÀ ಮೂಲ ಸಂಸ್ಕೃತಿ ಹೊಂದಿರುವ ಬುಡಕಟ್ಟು ಜನರ ಜಾನಪದವನ್ನು ಶ್ರಮವಹಿಸಿ ಸಂಗ್ರಹಿಸುವ ಕೆಲಸವನ್ನು ಬೋರಲಿಂಗಯ್ಯ ಮಾಡಿದ್ದರು. ಬೋರಲಿಂಗಯ್ಯ ಗುರುತಿಸಿದ್ದ ಬುಡಕಟ್ಟು ಜನಾಂಗದ ಪೈಕಿ 3 ಜನಾಂಗ ಈಗಾಗಲೇ ಅಳಿದು ಹೋಗಿದೆ. ವಿನಾಶದ ಅಂಚಿನಲ್ಲಿ ಇರುವ ಬುಡಕಟ್ಟು ಜನಾಂಗಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಹಾಗಾಗಿ ಬೋರಲಿಂಗಯ್ಯ ಹುಟ್ಟುಹಬ್ಬವನ್ನು ಜನಪದೀಯವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ವೀರಭೂಮಿ ಪ್ರವಾಸಿ ಗ್ರಾಮದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಡಿನ 29 ಜನ ಜಾನಪದ ಕಲಾವಿದರನ್ನು 'ನೆಲ ಮೂಲ ಸಂಸ್ಕೃತಿಯ ಪ್ರತಿನಿಧಿಗಳು' ಎಂದು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್.ವಿ. ಸುರೇಶ್, ಕರ್ನಾಟಕ ಜಾನಪದ ವಿವಿ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ, ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಸೇರಿದಂತೆ ಖ್ಯಾತನಾಮರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ವೀರಭೂಮಿ ಪ್ರವಾಸಿ ಗ್ರಾಮದ ಜನರಲ್ ಮ್ಯಾನೇಜರ್ ಅವಿನಾಶ್ ಎಂ.ಪಿ., ವ್ಯವಸ್ಥಾಪಕ ನಾಗೇಂದ್ರ ಹೆಚ್.ಆರ್. ಹಾಗೂ ಪೃಥ್ವಿರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net