ಜನಪದ ಉಳಿಸಲು ಸಕ್ರಿಯರಾಗಿರಿ,  ಶಾಸಕ ಮಹೇಶ ಟೆಂಗಿನಕಾಯಿ ಸಲಹೆ

IMG_20250718_210625_645-1.jpg
Published on

ಹುಬ್ಬಳ್ಳಿ: ದೇಶಿಯ ಕಲೆ ಜಾನಪದ ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಸಕ್ರಿಯವಾಗಿ ಕೆಲಸ ಮಾಡಬೇಕು. ಆಗಲೇ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಾಧ್ಯ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಇಲ್ಲಿಯ ಉಣಕಲ್ಲ ಸಾಯಿನಗರದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಮೂಲ ಜನಪದ ಹಾಡುಗಾರಿಕೆ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿದರು.

ನಮ್ಮ ಸಂಸ್ಕೃತಿ ನಮಗೆ ಹೆಮ್ಮೆಯಾಗಿದೆ. ಸಾಯಿ ಮಹಿಳಾ ಮಂಡಳದವರು ಮೂಲ ಜನಪದ ಹಾಡುಗಳನ್ನು ಕಲಿತು ಅದ್ಭುತ ಪ್ರದರ್ಶನ ನೀಡಿದ್ದಾರೆ. ಒಳ್ಳೆಯ ಕಾರ್ಯಕ್ರಮ, ಇದನ್ನು ಎಲ್ಲ ಮಕ್ಕಳು ಕಲಿಯಬೇಕು ಎಂದರು.

ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಮಹಿಳಾ ಮಂಡಳದವರು ಅದ್ಭುತವಾಗಿ ಅಭಿನಯದೊಂದಿಗೆ ಹಾಡುಗಳನ್ನು ಪ್ರಸ್ತುತಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಿತ್ತೂರ ರಾಣಿ ಚೆನ್ನಮ್ಮ, ಹೇಮರಡ್ಡಿ ಮಲ್ಲಮ್ಮ, ಅಕ್ಕಮಹಾದೇವಿ, ನೀಲಾಂಬಿಕೆ, ಗಂಗಾಂಬಿಕೆ, ನಾಗಲಾಂಬಿಕೆ ತಂಡದವರು ಮೂಲ ಜನಪದ ಹಾಡುಗಳ ಪ್ರದರ್ಶನ ನೀಡಿದರು. ಶಾಸಕರು ಪ್ರಮಾಣ ಪತ್ರ ವಿತರಿಸಿದರು.

ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ನದಾಫ ಎಚ್.ಎಚ್., ಶಿವಣ್ಣ ಕೋರಿ, ಅಶೋಕ ಇರಗಾರ, ಈಶ್ವರಗೌಡ ಬಮ್ಮನಗೌಡರ, ಡಾ. ಲಿಂಗರಾಜ ಮುಳ್ಳಳ್ಳಿ, ಗುರುಸಿದ್ದಪ್ಪ ಬಡಿಗೇರ, ಫಕ್ಕಿರಪ್ಪ ಕುಂಬಾರ, ಶಾಂತಾ ಬ್ಯಾಹಟ್ಟಿ ಇತರರು ಇದ್ದರು.

ಪ್ರೀತಿ ಕಡಕೋಳ ನಿರೂಪಿಸಿದರು. ಡಾ. ರಾಮು ಮೂಲಗಿ ಪ್ರಾಸ್ತಾವಿಕ ಮಾತನಾಡಿದರು. ಗೀತಾ ಮುಳ್ಳಳ್ಳಿ ಸ್ವಾಗತಿಸಿದರು. ಗೀತಾ ಅಂಗಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net