ಜಾನಪದವು ಸುಖ ದುಃಖಗಳ ಆಗರ

IMG_20230912_212931_695-1.jpg
Published on

ಹುಬ್ಬಳ್ಳಿ: ನಿತ್ಯ ಜೀವನದಲ್ಲಿ ಬೆಳೆದುಕೊಂಡು ಬಂದಿರುವ ಜಾನಪದವು ಸುಖ ದುಃಖಗಳ ಆಗರವಾಗಿದೆ ಎಂದು ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಕೆ. ಆದಪ್ಪನವರ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ, ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್, ಜೀವಿಗಳ ಕಲಾ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಫಾರೆಸ್ಟ್ ಕಾಲನಿಯ ಎಚ್.ವಿ. ಚೆನ್ನಗೌಡರ ನಿವಾಸದಲ್ಲಿ ಆಯೋಜಿಸಿದ್ದ 10ನೇ ವರ್ಷದ 24ನೇ ಮನೆ ಮನೆಯಲ್ಲಿ ಶ್ರಾವಣ ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಜನಪದರಿಗೆ ಶ್ರಾವಣ ಮಾಸ ಪವಿತ್ರವಾಗಿದ್ದು, ಹಬ್ಬ ಹರಿದಿನಗಳ ಆಗರ ಇದಾಗಿದೆ ಎಂದರು.

ನಿವೃತ್ತ ಇಂಜಿನಿಯರ್ ಎಚ್.ವಿ. ಚೆನ್ನಗೌಡರ ಅಧ್ಯಕ್ಷತೆ ವಹಿಸಿದ್ದರು.
ಡಾ. ರಾಮು ಮೂಲಗಿ ಅವರು ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳ ಕುರಿತು ಹಾಡಿನೊಂದಿಗೆ ವಿವರಿಸಿದರು.

ಅತಿಥಿಗಳಾಗಿದ್ದ ಎಲ್.ಎಚ್. ಭಜಂತ್ರಿ, ಬಿ.ವಿ. ಚೆನ್ನಗೌಡರ, ಅನ್ನರ್ಪೂಣ ಚೆನ್ನಗೌಡರ, ಎಂ. ಸಯ್ಯದ್ ಮಾಸ್ಟರ್, ಬಸವರಾಜ ಕಟ್ಟಿಮನಿ ಪಾಲ್ಗೊಂಡಿದ್ದರು.

ರವಿ ಸಾಬಣ್ಣವರ ಸ್ವಾಗತಿಸಿದರು. ಆಕಾಶ ಚೆನ್ನಗೌಡರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net