ಶಾಲೆ ಅಂಗಳದಲ್ಲಿ ಜಾನಪದ, ಕುಂದಗೋಳದಲ್ಲಿ ಉಪನ್ಯಾಸ, ಪ್ರಾಯೋಗಿಕ ಹಾಡುಗಾರಿಕೆ

IMG-20240921-WA0011_1.jpg
Published on

ಹುಬ್ಬಳ್ಳಿ: ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್ ಹುಬ್ಬಳ್ಳಿ, ಕನ್ನಡ ಮತ್ತು ಸಂಸತಿ ಇಲಾಖೆ, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಮತ್ತು ತಾಲೂಕು ಘಟಕ ಧಾರವಾಡ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂಲ ಜನಪದ ಅರಿವು, ಉಪನ್ಯಾಸ ಮತ್ತು ಪ್ರಾಯೋಗಿಕ ಹಾಡುಗಾರಿಕೆಯ ಶಾಲಾ ಅಂಗಳದಲ್ಲಿ ಜಾನಪದ ಕಾರ್ಯಕ್ರಮವನ್ನು ಕುಂದಗೋಳದ ಗಾಂಧಿ ಹಿಂದಿ ವಿದ್ಯಾಪೀಠದಲ್ಲಿ ಏರ್ಪಡಿಸಲಾಗಿತ್ತು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಅರವಿಂದ ಕಟಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾನಪದ ತಜ್ಞ ಡಾ. ರಾಮು ಮೂಲಗಿ, ಡಾ. ನದಾಫ ಎಚ್.ಎಚ್. ಅವರು ಮೂಲ ಜನಪದ ಸಾಹಿತ್ಯ ಮತ್ತು ಬದುಕು ಕುರಿತು ಮಾತನಾಡಿದರು.

ಕುಂದಗೋಳ ತಾಲೂಕು ಕಸಾಪ ಅಧ್ಯಕ್ಷ ಪ್ರಭುಗೌಡ ಸಂಕಾಗೌಡಶ್ಯಾನಿ ಅಧ್ಯಕ್ಷತೆ ವಹಿಸಿದ್ದರು. ಗಾಂಧಿ ಹಿಂದಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಫ್.ಕೆ. ಬಾಳೆಹಳ್ಳಿಮಠ ಸಾನ್ನಿಧ್ಯ ವಹಿಸಿದ್ದರು.

ಕುಂದಗೋಳ ತಾಲೂಕು ಶರಣ ಸಾಹಿತ್ಯ ಪರಿಷತ್ ಕಾರ್ಯಾಧ್ಯಕ್ಷ ಸಿ.ಬಿ. ಪಾಟೀಲ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಸಾಂಭಯ್ಯ ಹಿರೇಮಠ, ಹಿರಿಯ ಪತ್ರಕರ್ತ ಅಶೋಕ ಘೋರ್ಪಡೆ, ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ರಾಘವೇಂದ್ರ ನತಿರ್, ಗಾಂಧಿ ಹಿಂದಿ ವಿದ್ಯಾಪಿಠದ ಅಧ್ಯಕ್ಷ ಎಂ.ಆರ್. ದೊಡ್ಡಮನಿ, ಉಪಾಧ್ಯಕ್ಷ ಜಿ.ಎಚ್. ತಳವಾರ, ಖಜಾಂಚಿ ಎಸ್.ಎಂ. ಯಲಿಗಾರ, ಸದಸ್ಯರಾದ ಕೆ.ಎಂ. ಕುಂಬಾರ, ಬಿ.ಸಿ. ನೆಲಗುಡ್ಡ ಅತಿಥಿಗಳಾಗಿದ್ದರು.

ಜಾನಪದ ಕಲೆ ಪ್ರದರ್ಶನ ನೀಡಿದ ಅಪ್ಪಟ ಗ್ರಾಮೀಣ ಪ್ರತಿಭೆಗಳಾದ ಶಿವಪ್ಪ ಅಳಗವಾಡಿ (ಭಜನಾ ಕಲಾವಿದರು), ದಾವಲಸಾಬ ನದಾಫ (ಹೆಜ್ಜೆ ಮೇಳ), ವಸಂತ ಚಹ್ವಾಣ (ಸಂಗೀತ), ಕುಬೇರಗೌಡ (ಕರಡಿ ಮಜಲು), ಮಹದೇವಪ್ಪ ಖಡೋಜಿ, ಮಂಜುನಾಥ ಜಾಧವ, ಶಿವಪ್ಪ ಬಂಡಿವಾಡ (ಜನಪದ ಕಲಾವಿದರು) ಇವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net