ಜನಪದ ಜಗುಲಿ ಉದ್ಘಾಟನೆ, ಮನೆಮನೆಯಲ್ಲಿ ಶ್ರಾವಣ ಜಾನಪದಕ್ಕೆ ಚಾಲನೆ

IMG_20240808_204205_908.jpg
Published on

ಹುಬ್ಬಳ್ಳಿ: ಇಲ್ಲಿಯ ಭೈರಿದೇವರಕೊಪ್ಪ ಬಳಿಗಾರ ಹಕ್ಕಲದ ಕಲ್ಪತರು ನಿಲಯದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆ, ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್ ಸಯುಕ್ತ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಿದ ಜನಪದ ಜಗಲಿಯನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.

ಡಾ. ಶರಣಪ್ಪ ಕೊಟಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅತಿಥಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿದರು.

ಮನೆ ಮನೆಯಲ್ಲಿ ಶ್ರಾವಣ ಜಾನಪದ 12ನೇ ವರ್ಷದ ಕಾರ್ಯಕ್ರಮವನ್ನು ವಾದ್ಯ ಬಾರಿಸುವ ಮೂಲಕ ಉದ್ಘಾಟಿಸಿದ ಡಾ. ಸಂಗಮನಾಥ ಲೋಕಾಪುರ ಅವರು, ನಾವಿಂದು ಹಬ್ಬ ಹರಿ ದಿನಗಳ ಮಹತ್ವವನ್ನು ಮರೆಯುತ್ತಿದ್ದೇವೆ. ಇವುಗಳ ಬಗ್ಗೆ ಜಾಗೃತಿ ಮೂಡಿಸುವ ಇಂಥ ಕಾರ್ಯಕ್ರಮಗಳು ಮೇಲಿಂದ ಮೇಲೆ ಜರುಗಬೇಕೆಂದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಡಾ. ಬಸು ಬೇವಿನಗಿಡದ, ಡಾ. ಜಿನದತ್ ಹಡಗಲಿ, ಗಂಗನಗೌಡ ಪಾಟೀಲ, ಎಸ್.ಎಸ್. ಗೋವಿಂದರೆಡ್ಡಿ, ಸಚಿನ್ ಸಿದ್ದಣ್ಣವರ್, ಎಸ್.ಎಸ್. ಜಕ್ಕನಗೌಡರ, ಬಸವರಾಜ ಸುಳ್ಳದ, ಎಫ್.ಆರ್. ಕರವೀರಮಠ, ಮಹಾದೇವ ಹುಡೆದ, ಶಿವಯೋಗಪ್ಪ ಎಮ್ಮಿ, ಡಾ. ಎಚ್.ವಿ. ಬೆಳಗಲಿ, ಡಾ. ಮಹೇಶ ಹೊರಕೇರಿ ಅವರನ್ನು ಗೌರವಿಸಲಾಯಿತು.

ಅತಿಥಿಗಳಾಗಿ ಶಾಂತಣ್ಣ ಕಡಿವಾಳ, ವಿ.ಜಿ. ಪಾಟೀಲ, ಆರ್.ಎಂ. ಗೋಗೇರಿ. ಡಿ.ಟಿ. ಪಾಟೀಲ್, ಸಂಭಾಜಿ ಕಲಾಲ್, ಬಸವರಾಜ ಸುಳ್ಳದ, ಚೆನ್ನು ಹೊಸಮನಿ, ಬಸವರಾಜ ಯಕಲಾಸಪುರ, ಸಿ.ಎಂ. ಚನ್ನಬಸಪ್ಪ, ಸಿ.ಎಸ್. ಪಾಟೀಲ್ ಮುಂತಾದವರು ಪಾಲ್ಗೊಂಡಿದ್ದರು.

ಡಾ. ರಾಮು ಮೂಲಗಿ ಶ್ರಾವಣ ಜಾನಪದ ಕುರಿತು ಉಪನ್ಯಾಸ ನೀಡಿದರು. ವೀಣಾ ನೆಸ್ವಿ ಹಾಗೂ ಮಹೇಶ ಪಾಟೀಲ್ ತಂಡದವರು ನಾಗರ ಪಂಚಮಿ ಹಾಡುಗಳನ್ನು ಹೇಳಿದರು. ಶಿವಸ್ವಾಮಿ ಹಿರೇಮಠ ಪ್ರಾರ್ಥಿಸಿದರು. ಗದಿಗಯ್ಯ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಕುಬೇರಗೌಡ ಮುರಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net