ಎಲ್ಲ ಸಾಹಿತ್ಯದ ಬೇರು ಜಾನಪದ,  ವಿಶ್ವ ಜಾನಪದ ದಿನಾಚರಣೆ ಉದ್ಘಾಟಿಸಿದ ಆರ್.ಎಸ್. ಹೊಸೂರ ಅಭಿಮತ

IMG-20250822-WA0002-1.jpg
Published on

ಹುಬ್ಬಳ್ಳಿ: ಜನಪದವು ಎಲ್ಲ ಸಾಹಿತ್ಯಗಳ ತಾಯಿ ಬೇರಾಗಿದ್ದು ಅದರ ಮೂಲಕವೇ ನಾವು ಎಲ್ಲ ವಿಷಯಗಳ ಮಹಲುಗಳನ್ನು ಕಟ್ಟಿದ್ದೇವೆ, ಜಾನಪದವು ಮೌಲ್ಯಗಳ ಆಗರವಾಗಿದೆ ಎಂದು ಶ್ರೀ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಎಸ್. ಹೊಸೂರ ಅಭಿಪ್ರಾಯಪಟ್ಟರು.

ಇಲ್ಲಿಯ ನವನಗರದ ಸಾಯಿ ಬಿ.ಇಡಿ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೂಲ ಜಾನಪದವನ್ನು ಉಳಿಸುವ ಕಾರ್ಯ ಆಗಬೇಕಾಗಿದೆ. ಇದಕ್ಕಾಗಿ ಎಲ್ಲರೂ ಶ್ರಮಿಸಬೇಕು ಎಂದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ನದಾಫ್ ಎಚ್.ಎಚ್. ಮಾತನಾಡಿ, ಜಾನಪದವು ಹಿರಿಯರ ಅನುಭವದಿಂದ ಬಂದಿದೆ. ಇದರಲ್ಲಿ ಅಪಾರವಾದ ಸಂಸ್ಕೃತಿಯ ಚಹರೆಗಳಿವೆ. ಆ ಚಹರೆಗಳ ಮೂಲಕ ನಾವು ನಮ್ಮ ನೆಲಮೂಲ ಇತಿಹಾಸವನ್ನು ಅರಿತುಕೊಳ್ಳಬಹುದು. ಹಬ್ಬಗಳ ಆಚರಣೆಯೊಂದಿಗೆ ವೈಜ್ಞಾನಿಕತೆಯನ್ನು ತಿಳಿಯಬಹುದೆಂದು ಹೇಳಿದರು.

ಜಾನಪದ ವಿದ್ವಾಂಸ ಡಾ. ರಾಮು ಮೂಲಗಿ, ಮೂಲ ಜನಪದ ಹಾಡುಗಳನ್ನು ಹಾಡಿದರು. ನಕಲಿ ಜಾನಪದದ ಹಿನ್ನೆಲೆಯಲ್ಲಿ ನಮ್ಮ ಮೂಲ ಜನಪದ ಹಾಡುಗಳು ಮಾಯವಾಗುತ್ತಿವೆ. ಇವುಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಜಾನಪದ ಉಳಿಸಬಹುದು ಎಂದರು.

ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಎಸ್. ಜಕ್ಕನಗೌಡರು ಮಾತನಾಡಿ, ಜನಪದ ನಮ್ಮ ನಾಡಿನ ಮೌಲ್ಯಯುತ ಆಸ್ತಿಯಾಗಿದ್ದು, ಅದನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಪಿ.ಎಸ್. ಕೆಂಗಾರ್ ಮಾತನಾಡಿ, ಜಾನಪದ ಎನ್ನುವುದು ಬಹಳ ಮೌಲ್ಯಯುತವಾದದ್ದು ಎಂದರು.
ಸಿಬ್ಬಂದಿ ವೈ.ಬಿ. ಕೊಟ್ಟರಿ, ಹುಸೇನಿ ಗೋಡೆಖಾನ, ಪ್ರಕಾಶ ಇಳಕಲ್ಲ, ಜಿ.ಎಸ್.ಅಣ್ಣಿಗೇರಿ ಮುಂತಾದವರು ಇದ್ದರು.

ಭೀಮವ್ವ ಕರಿಯವರ ಪ್ರಾರ್ಥನೆ ಹಾಡಿದರು. ನೇತ್ರಾ ಕುರಬರ ಕಾರ್ಯಕ್ರಮ ನಿರೂಪಿಸಿದರು. ಸಹನಾ ಪಾಟೀಲ ಸ್ವಾಗತಿಸಿದರು. ಭಾಗೀರತಿ ಕುರಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net