

ಹುಲಸೂರು: ಜಾನಪದದ ನಿರ್ಲಕ್ಷ್ಯ ಮತ್ತು ಮರೆವು ಜ್ಞಾನ ಪರಂಪರೆಗೆ ಧಕ್ಕೆ ತಂದಂತೆ ಎಂದು ಜಿಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ ಹೇಳಿದರು.
ಜಾನಪದ ಪರಿಷತ್‌ನಿಂದ ಗಡಿಗೌಡಗಾಂವದಲ್ಲಿ ಭಾನುವಾರ ಏರ್ಪಡಿಸಿದ್ದ `ಜಾನಪದ: ಚಿಂತನೆ ಮತ್ತು ಕಲಾ ಉತ್ಸವ'ದಲ್ಲಿ ಮಾತನಾಡಿ, ಜಾನಪದ ಸಂಸ್ಕೃತಿ ಜ್ಞಾನ ಪರಂಪರೆಯಾಗಿದೆ. ಹಳ್ಳಿ ಜನರ ವಲಸೆಯಿಂದ ಜಾನಪದ ಅವನತಿಯತ್ತ ಸಾಗಿದೆ. ಲಿಂಗ, ಜಾತಿ, ಮತದ ಎಲ್ಲೆ ಮೀರಿದ ಜ್ಞಾನ ಜಾನಪದ ಎಂದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ರಾಜಕುಮಾರ ಹೊನ್ನಾಡೆ ಮಾತನಾಡಿ, ನಶಿಸುತ್ತಿರುವ ಜಾನಪದಕ್ಕೆ ಆಧುನಿಕ ಸ್ಪರ್ಶ ನೀಡಬೇಕು. ಇಂಗ್ಲಿಷ್ ಮಾಧ್ಯಮದ ಶಿಕ್ಷಣದ ಮಧ್ಯೆ ಇದನ್ನು ಉಳಿಸುವ ಸವಾಲು ನಮ್ಮೆಲ್ಲರ ಎದುರಿಗಿದೆ ಎಂದು ಹೇಳಿದರು.
ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಶಿವರಾಜ ಖಪಲೆ ಮಾತನಾಡಿ, ಅತಿಯಾದ ಮೊಬೈಲ್, ಟಿವಿ ಬಳಕೆಯಿಂದ ಜನಪದ ಸಂಸ್ಕೃತಿ ಅಪಾಯಕ್ಕೆ ಸಿಲುಕಿದೆ. ಭಜನೆ, ಹಂತಿ ಪದ, ಜೋಗುಳ ಪದಗಳನ್ನು ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯಗುರು ದೇವಾನಂದ ಕುರದೆ, ಗ್ರಾಪಂ ಮಾಜಿ ಅಧ್ಯಕ್ಷ ದತ್ತು ರಾಘೋ ಮಾತನಾಡಿದರು. ಪ್ರಮುಖರಾದ ಧೂಳಪ್ಪ ಭರಮಶೆಟ್ಟೆ, ಶಿವಾಜಿರಾವ ಸೂರ್ಯವಂಶಿ, ಡಾ.ಭೀಮಾಶಂಕರ ಬಿರಾದಾರ, ಸತೀಶ ಹಿರೇಮಠ, ಲಹು ಬಿರಾದಾರ, ವಿಶ್ವಜೀತ ಕುರದೆ, ನಾಗೇಶ ನೀಲಂಗೆ, ವೆಂಕಟರಾವ ಬಿರಾದಾರ, ಭಗವಾನ ಬಿರಾದಾರ, ರೇವಣ್ಣ ದರ್ಗೆ, ಜಗನ್ನಾಥ ಬಿರಾದಾರ, ದತ್ತು ಬಿರಾದಾರ, ಗುರುನಾಥ ತಾಂಬೋಳೆ, ಜಟಿಂಗರಾವ ಬಿರಾದಾರ ಇತರರಿದ್ದರು.
ಯುವರಾಜ ಬಿರಾದಾರ ಸ್ವಾಗತಿಸಿ ನಿರೂಪಣೆ ಮಾಡಿದರು. ಜಟ್ಟಿಂಗರಾವ ಬಿರಾದಾರ, ಜಗನ್ನಾಥ ತಾಂಬೋಳೆ ಅವರಿಂದ ವಚನ, ತತ್ವಪದ ಗಾಯನ ನಡೆಯಿತು. ಹಾವಗಿಲಿಂಗೇಶ್ವರ ಭಜನಾ ತಂಡ, ಸಂಬಾಜಿ-ಬಾಲಾಜಿ ಮಹಿಳಾ ಭಜನಾ ತಂಡದಿAದ ತಡರಾತ್ರಿವರೆಗೆ ಭಜನೆ ಜರುಗಿತು.