ಸುಪ್ರೀಂ ತೀರ್ಪಿಗೆ ಜನಾಂದೋಲನ ವೇದಿಕೆ ಸ್ವಾಗತ

Published on

ಮೈಸೂರು: ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರ ಆಯಾ ರಾಜ್ಯಗಳಿಗೆ ಇದೆ ಎಂಬ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ರಾಜ್ಯ ಮಾದಿಗರ ಜನಾಂದೋಲನ ವೇದಿಕೆ ಸ್ವಾಗತಿಸುತ್ತದೆ ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಸಿ.ರಮೇಶ್ ಹೇಳಿದರು.
ತೀರ್ಪಿನಲ್ಲಿ ಕೆನೆ ಪದರ ವಿಷಯವನ್ನು ಜಾರಿ ಸಂದರ್ಭದಲ್ಲಿ ಪರಿಗಣಿಸುವಂತೆ ತಿಳಿಸಿರುವುದಕ್ಕೆ ನಮ್ಮ ಸಮ್ಮತಿಯಿಲ್ಲ. ಅಸ್ಪೃಶ್ಯರಿಗೆ ಕೆನೆ ಪದರು ಅನ್ವಯಿಸುವುದಿಲ್ಲ. ಒಂದು ವೇಳೆ ಉತ್ತಮ ಉದ್ಯೋಗ ಸಿಕ್ಕಿದರೂ ಇವರನ್ನು ಸವರ್ಣೀಯರೆಂದು ಪರಿಗಣಿಸುವ ಸಾಧ್ಯತೆ ಇರುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ರಾಜ್ಯ ಸರ್ಕಾರ ಒಳ ಮೀಸಲಾತಿ ಕೂಡಲೇ ಜಾರಿಗೊಳಿಸಬೇಕು. ಬ್ಯಾಕ್‌ಲಾಗ್ ಹುದ್ದೆಗಳು ಹಾಗೂ ಇನ್ನಿತರ ಹುದ್ದೆಗಳಿಗೆ ಭರ್ತಿ ಮಾಡಬೇಕು. ಈ ಸಂದರ್ಭದಲ್ಲಿ ಒಳ ಮೀಸಲಾತಿ ಮಾನದಂದ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಉಪ ಮೇಯರ್ ಕೃಷ್ಣ, ಮುಖಂಡರಾದ ನಾಗರಾಜು ಎಂ.ಸಿ. ಹುಂಡಿ, ಹಡಜನ ಸ್ವಾಮಿ, ಶಂಕರ ಹಲಗಯ್ಯನಹುಂಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net