ಬಡವರಿಗೆ ಬರೆ ಎಳೆದ ಸರ್ಕಾರ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

udp-10-bjp 3
Published on

ಉಡುಪಿ: ರಾಜ್ಯ ಕಾಂಗ್ರೆಸ್​ ಸರ್ಕಾರ ಜನಪ್ರಿಯ ಸರ್ಕಾರವಲ್ಲ. ಜಾಹಿರಾತಿನ ಸರ್ಕಾರ. ಬಡವರ ಪರ ಸರ್ಕಾರವಲ್ಲ. ಬೆಲೆ ಏರಿಕೆ ಮೂಲಕ ಬಡವರಿಗೆ ಬರೆ ಎಳೆದ ಸರ್ಕಾರ. ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಬಿಜೆಪಿ ವತಿಯಿಂದ ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ನಡೆದ ಜನಾಕ್ರೋಶ ಯಾತ್ರೆಯಲ್ಲಿ ಅವರು ಮಾತನಾಡಿದರು. ಹಿಂದುಳಿದವರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಹಿಂದೆ ಹೋಗುತ್ತಿದ್ದಾರೆ. ಅವರಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬುದಾಗಿ ಭಾವಿಸಿದ್ದಾರೆ. ಬಜೆಟ್ನಲ್ಲಿ ಮುಸ್ಲಿಂ ಹೆಣ್ಮಕ್ಕಳ ಆತ್ಮರಕ್ಷಣಾ ತರಬೇತಿ ಅನುದಾನ ಕೊಟ್ಟಿದ್ದಾರೆ. ಲವ್​ ಜಿಹಾದ್​ಗೆ ಬಲಿಯಾಗುತ್ತಿರುವ ಹಿಂದೂ ಹೆಣ್ಮಕ್ಕಳಿಗೆ ಹಣವೇ ಇಲ್ಲ. ಮುಸ್ಲಿಂ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಕಲಿಯಲು 30 ಲಕ್ಷ ರೂ. ನೀಡುತ್ತಾರೆ. ಬಡಹಿಂದು ವಿದ್ಯಾರ್ಥಿಗಳು ವಿದೇಶದಲ್ಲಿ ವಿದ್ಯಾಭ್ಯಾಸ ಪಡೆಯಲು ನಯಾಪೈಸೆ ನೀಡುತ್ತಿಲ್ಲ. 65 ವರ್ಷ ಸುದೀರ್ ಆಡಳಿತ ನಡೆಸಿದ ಕಾಂಗ್ರೆಸ್​ ಮುಸ್ಲಿಮರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಮಾಡಿಲ್ಲ ಎಂದರು.

ಭ್ರಷ್ಟಾಚಾರದಲ್ಲಿ ನಂ. 1

ಬಿಜೆಪಿ ಸರ್ಕಾರ ಅವಧಿಯಲ್ಲಿ ಅಭಿವೃದ್ಧಿಯಲ್ಲಿ ಗುಜರಾತ್​ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿ ಇತ್ತು. ಪ್ರಸ್ತುತ ವಾಲ್ಮೀಕಿ ನಿಗಮದ ನೂರಾರು ಕೋಟಿ ಹಗರಣ, ಮೂಡ ಹಗರಣಗಳಿಂದ ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್​ ಒನ್​ ಸ್ಥಾನಕ್ಕೆ ತಲುಪಿದೆ. ಇದನ್ನು ಸ್ವತ@ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ, ಇದಕ್ಕಿಂತ ಬೇರೆ ಪ್ರಮಾಣಪತ್ರ ಬೇಕೆ ಎಂದು ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್​ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್​ ಮುಖ್ಯಸಚೇತಕ ಎನ್​. ರವಿಕುಮಾರ್​, ಸಂಸದ ಕೋಟ ಶ್ರೀನಿವಾಸ ಪೂಜಾರಿ, ದ.ಕ. ಸಂಸದ ಬ್ರಿಜೇಶ್​ ಚೌಟ, ಶಾಸಕರಾದ ಸುನೀಲ್​ ಕುಮಾರ್​ , ಗುರ್ಮೆ ಸುರೇಶ್​ ಶೆಟ್ಟಿ, ಕಿರಣ್​ ಕೊಡ್ಗಿ, ಗುರುರಾಜ್​ ಗಂಟಿಹೊಳಿ, ವಿಪ ಸದಸ್ಯ ಧನಂಜಯ ಸರ್ಜಿ, ಕಿಶೋರ್​ ಕುಮಾರ್​ ಪುತ್ತೂರು, ಮಾಜಿ ಶಾಸಕರಾದ ಲಾಲಾಜಿ ಮೆಂಡನ್​, ಹಾಲಾಡಿ ಶ್ರೀನಿವಾಸ ಶೆಟ್ಟಿ, ಪ್ರಮೋದ್​ ಮಧ್ವರಾಜ್​, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಮುಖಂಡರಾದ ಬಿ.ಎಸ್​. ನಡಹಳ್ಳಿ, ತಮ್ಮೇಶ್​ ಗೌಡ, ಕುಯಿಲಾಡಿ ಸುರೇಶ್​ ನಾಯಕ್​, ದಿನೇಶ್​ ಅಮೀನ್​, ಜಿತೇಂದ್ರ ಶೆಟ್ಟಿ, ದೀಪಕ್​ಕುಮಾರ್​ ಶೆಟ್ಟಿ, ಸುರೇಶ್​ ಶೆಟ್ಟಿ ಗೋಪಾಡಿ, ರಾಜೀವ್​ ಕುಲಾಲ್​ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net