

ರಾಯಚೂರು ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಣತಿಯು ಅವೈe್ಞÁನಿಕ ಸಮೀಕ್ಷೆಯಾಗಿದೆಂದು ಎಂಎಲ್ಸಿ ಕೆ.ಎಸ್ ನವೀನ ಕುಮಾರ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ,ವೈ.ವಿಜಯೇಂದ್ರ ಅವರು ಈಗಾಗಲೇ ಹೇಳಿಕೆ ನೀಡಿದ್ದು, ಇದೊಂದು ಕಸದ ಬುಟ್ಟಿಗೆ ಎಸಿಯೋ ಗಣತಿಯಾಗಿದೆ. ಒಂದು ಸಮುದಾಯದವರನ್ನು ಮೆಚ್ಚಿಸಲು ಗಣತಿ ಪ್ರಾರಂಭ ಮಾಡಲಾಗಿದೆ. ಅನೇಕ ಜಾತಿಗಳು ೨೦೧೧ ಕ್ಕಿಂತ ಸಂಖ್ಯೆ ಕಡಿಮೆಯಾಗಿವೆ.
ಇದೊಂದು ಅವೈe್ಞÁನಿಕ ಸಮೀಕ್ಷೆಯಾಗಿದೆ. ಈ ಹಿಂದೆ ಮೈಸೂರು ಮಹಾರಾಜರು ಜಾತಿಗಣತಿಯನ್ನು ವೈe್ಞÁನಿಕವಾಗಿ ಮಾಡಿದ್ದರು. ಅ ಮಾದರಿಯಲ್ಲಿ ಜಾತಿ ಗಣತಿ ಮಾಡಿದ್ದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಈ ವರದಿ ಇವತ್ತು ಕ್ಯಾಬಿನೇಟïನಲ್ಲಿ ಚರ್ಚೆಯಾಗುತ್ತಿದೆ ಆದರೆ ಕಾಂಗ್ರೆಸ್ ಪಕ್ಷದ ಸಚಿವರು ಅಪಸ್ವರ ಎತ್ತಲಿದ್ದಾರೆ. ಗಣತಿ ಕುರಿತು ಹಲವು ಸಮುದಾಯದ ಸ್ವಾಮಿಗಳು ಅಸಮಾಧಾನ ವ್ಯಕ್ತಪಡಿಸಿz್ದÁರೆ ಎಂದರು.
ರಾಜ್ಯ ಸರ್ಕಾರದ ವಿರೋಽ ನೀತಿಗಳ ಹಾಗೂ ಬೆಲೆ ಏರಿಕೆ ಖಂಡೀಸಿ ಏ.೨೩ ರಂದು ರಾಜ್ಯಾಧ್ಯಕ್ಷ ಬಿ,ವೈ.ವಿಜಯೇಂದ್ರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಅಂದು ಮಧ್ಯಾಹ್ನ ೦೩ ಗಂಟೆಗೆ ನಗರದ ಚಂದ್ರಮೌಳೇಶ್ವರ ವೃತ್ತದಿಂದ ಹಳೆ ಜಿಲ್ಲಾಽಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕಂಡು ನಂತರ ಸಂಜೆ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗುವುದು. ಹೋರಾಟದಲ್ಲಿ ರೈತರು, ಮಹಿಳೆಯರು, ಕಾರ್ಮಿಕರು ಸೇರಿ ಹತ್ತು ಸಾವಿರಕ್ಕೂ ಹೆಚ್ಚಿನ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಹೋರಾಟದಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ನಾಯಕರಾದ ಆರ್.ಅಶೋಕ, ಚಲುವನಾರಾಯಣ ಸ್ವಾಮಿ, ಶ್ರೀರಾಮುಲು, ಗೋವಿಂದ ಕಾರಜೋಳ ಸೇರಿದಮತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಹೋರಾಟವನ್ನು ಯಶಸ್ವಿಯಾಗಿ ಸಂಘಟನೆ ಮಾಡಬೇಕೆಂದು ಜನರ ಆಕ್ರೋಶವನ್ನು ಸರ್ಕಾರಕ್ಕೆಬಿಸಿ ಮುಟ್ಟುವಂತ ರೀತಿಯಲ್ಲಿ ಹೋರಾಟ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದ್ಯಂತ ಎರಡನೇ ಹಂತದ ಜನಾಕ್ರೋಶ ಯಾತ್ರೆ ಸಂಪನ್ನ ಆಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿ ಯಾತ್ರೆಗೆ ಉತ್ತಮವಾದ ಜನಸ್ಪಂದನೆ ಸಿಗುತ್ತಿದೆ. ಜನರು ಸ್ವಯಂ ಪ್ರೇರಿತ ಭಾಗಿಯಾಗುತ್ತಿದ್ದಾರೆ ಎಂದು ಹೇಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ರಾಯಚೂರಿಗೆ ಕೆಕೆಆರ್‌ಡಿಬಿ ಸೇರಿ ಅನೇಕ ಅನುದಾನ ಸಮರ್ಪಕವಾಗಿ ನೀಡುತ್ತಿಲ್ಲ. ಇದರಿಂದ ಈ ಭಾಗದ ಜನರಿಗೆ ಹಾಗೂ ಭಾಗದ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಅನೇಕ ಸಾರಿ ಎರಡು ಸದನಗಳಲ್ಲಿ ಧ್ವನಿ ಎತ್ತುವ ಪ್ರಯತ್ನ ಆಗಿದೆ. ಸಿಎಂ ಸೇರಿದಂತೆ ಕಾಂಗ್ರೆಸ್ ಮಂತ್ರಿಗಳು ಎಲ್ಲವೂ ಸರಿಯಾಗಿದೆ ಎನ್ನುವಂತೆ ಬಿಂಬಿಸುತ್ತಿದೆ.
ಇಡೀ ದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಅಽಕಾರದ ಕಾರಣಕ್ಕಾಗಿ ಕರ್ನಾಟಕ ಬೆಲೆ ಏರಿಕೆ, ಅತಿ ಹೆಚ್ಚು ಹಣದುಬ್ಬರ
ಎಂಬ ಕುಖ್ಯಾತಿ ಪಡೆದಿದೆ.
ಒಂದು ಕಡೆ ಬೆಲೆ ಏರಿಕೆ, ಮತ್ತೊಂಡು ಕಡೆ ಸಾಲದ ಮೇಲೆ ಸಾಲ ಮಾಡಿ ರಾಜ್ಯದ ಜನರ ಮೇಲೆ ಹೊರಿಸಲಾಗುತ್ತಿದೆ. ಸಾಲಕ್ಕೆ ಮಿತಿಯೇ ಇಲ್ಲ ಎನ್ನುವಂತಾಗಿ ಇದೀಗ ಜನಾಕ್ರೋಶಕ್ಕೆ ಕಾರಣವಾಗಿದೆ
ಎಂದು ತಿಳಿಸಿದರು. ೩೯ ಸಾವಿರ ಕೋಟಿ ಎಸ್ಸಿ, ಎಸ್ಟಿ ಹಣ ಬೇರೆ ಯೋಜನೆಗಳಿಗೆ ಖರ್ಚು ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲಾ ಆಯಾಮಗಳಲ್ಲೂ ಹಳಿ ತಪ್ಪಿದೆ. ಯತ್ನಾಳ್ ಆಕ್ರೋಶ ಶಮನ ಮಾಡುವುದಕ್ಕಾಗಿ ಜನಾಕ್ರೋಶ ಯಾತ್ರೆ ಮಾಡಲಾಗುತ್ತದೆ ಎಂದು ಹೇಳುವ ಪ್ರಿಯಾಂಕ್ ಖರ್ಗೆ ವಿರುದ್ಧವೇ ಅವರ ಮಂತ್ರಿಗಳು ಸ್ವಯಂ ಹೇಳಿಕೆಗಳನ್ನು
ನೀಡುತ್ತಿದ್ದಾರೆ. ಜನಾಕ್ರೋಶ ಯಾತ್ರೆ ಹೋರಾಟ ಜನಸಾಮಾನ್ಯರ ಅಜೆಂಡಾ ಅಡಿಯಲ್ಲಿಯೇ ನಡೆಯುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕರಾದ ಪ್ರತಾಪ್‌ಗೌಡ ಪಾಟೀಲ್, ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ತ್ರಿವಿಕ್ರಮ ಜೋಷಿ ಇದ್ದರು.