ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಜನಾಕ್ರೋಶ ಯಾತ್ರೆ

RAICHUR
RAICHUR
Published on

ರಾಯಚೂರು ರಾಜ್ಯ ಸರ್ಕಾರದ ದೋರಣೆ ಖಂಡಿಸಿ ರಾಜ್ಯದ ಬಿಜೆಪಿ ಪಕ್ಷದಿಂದ ನಡೆಸುತ್ತಿರುವ ಜನಾಕ್ರೋಶ ಯಾತ್ರೆಯನ್ನು ಕಾಶ್ಮೀರದ ಪಹಲ್ಗಾಮ್ ಘಟನೆ ನಿಮಿತ್ತ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ರಾಜ್ಯದ ಅನೇಕ ನಾಯಕರು ಕೈಗೆ ಕಪ್ಪು ಪಟ್ಟಿ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾದರು,

ನಂತರ ನಗರದ ಟಿಪ್ಪುಸುಲ್ತಾನ ಉದ್ಯಾನವನದಲ್ಲಿ ಹಮ್ಮಿಕೊಂಡ ಸಭೆಯಲ್ಲಿ ಬುಧವಾರ ಸಂಜೆ ಮಾತನಾಡಿ, ಕಾಶ್ಮೀರದಲ್ಲಿ ನಡೆದ ದುರ್ಘಟನೆಯಿಂದ ಅತ್ಯಂತ ಖಂಡನೀಯವಾಗಿದೆ. ಘಟನೆ ಕುರಿತು ಕಾಂಗ್ರೆಸ್ ಪಕ್ಷದ ನಾಯಕರು ಮನ ಬಂದAತೆ ಮಾತನಾಡುತ್ತಿz್ದÁರೆ. ಅರಬ್ ದೇಶದ ಪ್ರವಾಸದಲ್ಲಿದ್ದ ಪ್ರಧಾನ ನರೇಂದ್ರ ಮೋದಿ ಅವರು ಹಿಂತಿಗಿದ್ದು, ಸರಣಿ ಸಭೆಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮಾಡಿದ ತಪ್ಪಿಗೆ ಕಾಶ್ಮೀರದ ಸಮಸ್ಯೆ ಸಮಸ್ಯೆಯಾಗಿ ಉಳಿಯಲು ಕಾರಣವಾಗಿದೆ.

ಕೇಂದ್ರದಲ್ಲಿ ಬಿಜೆಪಿ ಅಽಕಾರಕ್ಕೆ ಬಂದಮೇಲೆ ಆರ್ಟಿಕಲï ೩೭೦ ತೆಗೆದುಹಾಕಿ ಅನೇಕ ಜನರ ಸೇರಿರ ಪ್ರಾಣ ಕಳೆದುಕೊಂಡ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಿದೆ. ಇದರಿಂದ ಕಾಶ್ಮೀರದಲ್ಲಿ ಶಾಂತಿ ನೆಲೆಸುವು ಕೆಲಸವಾಗಿದೆ. ದೇಶದಲ್ಲಿ ಬಿಜೆಪಿ ಪಕ್ಷವು ಅಽಕಾರಕ್ಕೆ ಬಂದಿರುವುದರಿAದ ಸಹಿಲಾಗದ ಉಗ್ರಗಾಮಿಗಳು ಪಾಕಿಸ್ತಾನದ ಕೈವಾಡದಿಂದ ಅಟ್ಟಹಾಸ ಮೆರೆದು ಕರ್ನಾಟಕ ಮುರು ಜನ ಸೇರಿ ದೇಶದ ಒಟ್ಟು ೨೮ ಜನರನ್ನು ಹತ್ಯೆ ಮಾಡಿದ್ದಾರೆ. ಪ್ರದಾನಿ ನರೇಂದ್ರ ಮೋದಿ ಕೈಗೆ ಬಳೆಗಳನ್ನು ತೊಟ್ಟಿಲ್ಲ ಉಗ್ರಗಾಮಿಗಳನ್ನು ಮಟ್ಟ ಹಾಕದೆ ಬಿಡುವುದಿಲ್ಲ ಎಂದರು.

ಸೋನಿಯಾ ಗಾಂಽ ಅವರ ಅಳಿಯ ರಾಬ್ರೆಟï ಅವರು ಗೊಂದಲದಲ್ಲಿದ್ದರೆ ಇವರಿಗೆ ನಮ್ಮದೇಶಕ್ಕಿಂತ ಇಟಲಿ ದೇಶದ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದಾರೆ ಅವರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ಕೇವಲ ೫ ಗ್ಯಾರೆಂಟಿಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ. ಆದರೆ ೬ ನೇ ಗ್ಯಾರೆಂಟಿ ಬಗ್ಗೆ ಮಾತನಾಡಿಲ್ಲ. ಬೆಲೆ ಏರಿಕೆ ಹೆಚ್ಚಳ ಮಾಡಿ ರೈತರು ಸೇರಿ ಜನಸಾಮಾನ್ಯರಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಈ ಹಿಂದೆ ಬಿಎಸ್ ಯಡಿಯೂರಪ್ಪ ರಾಜ್ಯದ ಸಿಎಂ ಇz್ದÁಗ ಅಭಿವೃದ್ದಿ ದೇಶದಲ್ಲಿ ಎರಡನೇ ಸ್ಥಾನದಲ್ಲತ್ತು. ಆದರೆ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿದೆಂದು ಸಿಎಂ ಅವರ ಆರ್ಥಿಕ ಸಲಹೆಗಾರ ರಾಯರೆಡ್ಡಿ ಹೇಳಿz್ದÁರೆ ಎಂದು ಟೀಕಿಸಿದರು.

ಗ್ಯಾರೆಂಟಿಗಳಿAದ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ ಇದರಿಂದ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆಂದು ಶಾಸಕ ರಾಜು ಕಾಗೆ ಹೇಳಿz್ದÁರೆ. ಈ ಸರ್ಕಾರದವರು ವಾಲ್ಮೀಕಿ ಅಭಿವೃದ್ಧಿ ನಿಗಮದ ೧೫೦ ಕೋಟಿ ಪಕ್ಕದ ತೆಲಂಗಾಣ ಚುನಾವಣೆಗೆ ಬಳಸಿz್ದÁರೆ. ಪರಿಶಿಷ್ಟ ಜÁತಿಯ ಹಣ ಬೇರೆ ಕೆಲಸಕ್ಕೆ ಬಳಸಿz್ದÁರೆ. ಕಾಂಗ್ರೆಸï ಸರ್ಕಾರ ಒಂದು ಕೊಟ್ಟೆ ಎರಡು ಕಿತ್ತುಕೊಳ್ಳುತ್ತಿದೆ ಯೆಂ ಆರೋಪಿಸಿದರು. ಅದರಿಂದ ಬಿಜೆಪಿಯೊಂದ ಜನಾಕ್ರೋಶ ಯಾತ್ರೆ ಮಾಡಲಾಗುತ್ತಿದೆ ಮೊದಲ ಅಂತದಲ್ಕಿ ಮೈಸೂರಿನಿಂದ ಪ್ರಾರಂಭ ಮಾಡಲಾಗಿದೆ. ರೈತ ವಿರೋಽ ಪಕ್ಷವನ್ನು ತೊಲಗಿಸಲು ನಾವು ಪಕ್ಷ ಸಂಘಟನೆ ಮಾಡಿ ರಾಜ್ಯದಲ್ಲಿ ಬಿಜೆಪಿ ಅಽಕಾರ ಬರುವಂತೆ ಕೆಲಸ ಮಾಡಬೇಕು. ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಹಿನ್ನಡೆಯಾಗಿರಬಹುದು ಆದರೆ ಮುಂದೆ ಅಽಕಾರಕ್ಕೆ ಪಕ್ಕ ನಾವು ಬರುತ್ತೇವೆ ಎಂದರು.

ವಿಧಾನ ಪರಿಷತ್ತಿನ ಮುಖ್ಯ ಸಂಚೇತಕ ಎನ್.ರವಿ ಕುಮಾರ ಮಾತನಾಡಿ, ಕಾಶ್ಮೀರದ ಪಹಲ್ಗಾಮ್ ಘಟನೆ ಬಗ್ಗೆ ನೆನಪಿಸಿಕೊಂಡರೇ ನೋವಾಗುತ್ತದೆ. ನಾವೆಲ್ಲ ಹಿಂದೂಗಳು ಒಗ್ಗೂಡದಿದ್ದರೆ ನಮ್ಮ ಮನೆ, ಆಸ್ತಿ,ಮಕ್ಕಳು ಸೇರಿ ಎಲ್ಲವು ನಾಶವಾಗುತ್ತಾರೆ.ಈ ಘಟನೆಗೆ ವಿಷ ಬೀಜ ಬಿತ್ತಿದ ಕಾಂಗ್ರೆಸ್ ಪಕ್ಷವಾಗಿದೆ. ನಮ್ಮ ಸೈನಿಕರು ದೇಶದ ಗಡಿ ಭಾಗದಲ್ಲಿ ಇರುವುದರಿಂದ ನಾವು ಬದುಕಿದ್ದೇವೆ. ಮುಂದೆ ಹಳ್ಳಿ ಹಳ್ಳಿಯಲ್ಲಿ ಬಾಂಬ್ ಹಾಕುವ ಸಮಯ ದೂರವಿಲ್ಲ.

ದೇಶದಲ್ಲಿ ರಕ್ತ ಭೀಜಾಸೂರರನ್ನು ಮಟ್ಟ ಹಾಕಲು ಇರುವ ಸರ್ಕಾರ ನಮ್ಮ ಸರ್ಕಾರವಾಗಿದೆ.

ರಾಯಚೂರಿನಲ್ಲಿ ಬಿಸಿಲು ಹೆಚ್ಚಳವಾದಂತೆ ರಾಜ್ಯದಲ್ಲಿ ಬೆಲೆ ಹೆಚ್ಚಳವಾಗಿದೆ. ಇದರಿಂದ ದುಡಿಯುವ ಕೈಗಳು ಕಂಗಾಲಾಗಿz್ದÁರೆ. ಅಲ್ಪ ಸಂಖ್ಯೆತರಿಗೆ ಬೆಣ್ಣೆ, ಹಿಂದೂಗಳಿಗೆ ಸುಣ್ಣ ಹೆರಚುತ್ತಿದ್ದಾರೆ ಈ ಕಾಂಗ್ರೆಸ್ ಪಕ್ಷದವರು ಎಂದರು.\

ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣ ಸ್ವಾಮಿ ಮಾತನಾಡಿ, ಉಗ್ರಗಾಮಿಗಳು ಎಷ್ಟೇ ನೋವು ಉಂಟು ಮಾಡಿದರು ನಾವು ಮಾತ್ರ ಆವೇಶಕ್ಕೆ ಬೀಳಬಾರದು. ಮೋದಿ ಅವರ ತಾಳ್ಮೆಯಿಂದ ದೇಶದ ಶಾಂತಿ ನೆಲೆಸಲು ಸಾಧ್ಯವಾಗಿದೆ. ಉಗ್ರಗಾಮಿಗಳ ಅಟ್ಟಹಾಸದಿಂದ ಅಮಾಯಕರು ಬಲಿಯಾಗಿz್ದÁರೆ. ಭಯೋತ್ಪಾದಕರಿಗೆ ಸೈನಿಕರನ್ನು ಹೇದುರಿಸಕು ಸಾಧ್ಯವಿಲ್ಲ. ಕೇವಲ ಧರ್ಮವನ್ನು ಕೇಳಿ ಹಿಂದೂ ಎಂದರೆ ಸಾಯಿಸಿz್ದÁರೆ. ಧರ್ಮ ಎನ್ನುವುದೇ ಒಂದು ಕರ್ಮವಾಗಿದೆಂದು ಬೇಸರ ವ್ಯಕ್ತಪಡಿಸಿದರು.

ಉಗ್ರಗಾಮಿಗಳಿಗೆ ಧರ್ಮ ಬೇಕು. ನಮಗೆ ಶಾಂತಿ ಬೇಕು. ದೇಶದಲ್ಲಿ ಶೇ.೮೦ ರಷ್ಟು ಹಿಂದೂಗಳು ಇದ್ದರು ಸಹ ನಮ್ಮಷ್ಟು ಆಯೋಗ್ಯರು ಯಾರು ಇಲ್ಲ. ನಾವು ಒಗ್ಗಟ್ಟು ಆದರೆ ಇನ್ನೊಬರ ಮಾತು ನಡೆಯುದಿಲ್ಲ. ಸೋನಿಯಾ ಗಾಂಽ ಅಳಿಯ ಹೇಳುತ್ತಿದ್ದಾರೆ. ಆರ್ಟಿಕಲï ೩೭೦ ತೆಗೆದಿರುವುದರಿಂದ ಈ ರೀತಿ ಹತ್ಯೆ ನಡೆದಿದೆ ಎಂದು ಹೇಳಿz್ದÁರೆ.

ಡಾ.ಬಿ.ಆರ್.ಅಂಬೇಡ್ಕರ್ ಅವರೆ ಹೇಳಿದ್ದಾರೆ. ಅರ್ಟಿಕಲ್ ೩೭೦ ಯಾವುದೇ ಕಾರಣಕ್ಕೆ ಸಂವಿಧಾನದಲ್ಲಿ ್ಕ ಇಡಬಾರದು. ಇದು ಜೀವಂತವಾಗಿರುವವರೆಗೆ ತನ್ನ ಒಡಲಿಗೆ ಬೆಂಕಿ ಇಟ್ಟುಕೊಂಡAತೆಯಾಗಿರುತ್ತದೆ ಎಂದರು.

ಈ ಹಿಂದೆ ಪುಲ್ವಾಮ ದಾಳಿಯಾಯಿತು ನಾವು ಮನೆಗೆ ಹೋಗಿ ನುಗ್ಗಿ ಹೊಡೆದಿದ್ದೇವೆ . ಆದೇ ರೀತಿ ಮತ್ತೆ ಸದ್ಯದಲ್ಲಿ ತಕ್ಕಾಪಾಠ ಕಲೋಸುತ್ತೇವೆ. ಬ್ರಿಟಿಷರ ಗುಂಡಿಗೆ ಹೆದರಿಲ್ಲ ಇವರಿಗೆ ಹೆದರುವ ಮಾತಿಲ್ಲ ಎಂದರು.

ಕನ್ನಡಿಗರ ರಕ್ಷಣೆಗಾಗಿ ಸಚಿವ ಸಂತೋಷ ಲಾಡï ಅವರನ್ನು ಕಳಿಸಿದ್ದೇವೆ ಎನ್ನುತ್ತಾರೆ. ಅವರಿಗೇನು ಗನï ಕೊಟ್ಟಿದ್ದಿರ ? ಎಂದು ಪ್ರಶ್ನೆ ಮಾಡಿದರು.

ನಗರ ಶಾಸಕ ಡಾ.ಶಿವರಾಜ ಪಾಟೀಲï ಮಾತನಾಡಿ, ಮೂರ್ಖ ಪಾಕಿಸ್ಥಾನದ ನಾಲ್ಕು ಜನ ಉಗ್ರಗಾಮಿಗಳು ಈ ಹತ್ಯೆ ಮಾಡಿದ್ಧಾರೆ. ಸಾಯಿಸುವಾಗ ನಿನ್ನದು ಯಾವ ಧರ್ಮ ಎಂದು ಕೇಳಿ ಕೊಲೆ ಮಾಡಿz್ದÁರೆ. ಪಾಕಿಸಾನಕ್ಕೆ ್ಕ ನಾವು ತಕ್ಕ ಪಾಠ ಕಳಿಸುತ್ತೇವೆ. ಪಿಎಂ ಸೇರಿ ಅನೇಕ ಅಽಕಾರಿಗಳು ಸರಣಿ ಸಭೆಗಳನ್ನು ಮಾಡಲಾಗುತ್ತಿದೆ ತಕ್ಕ ಪಾಠ ಖಂಡಿತ ಮಾಡುತ್ತಾರೆ ಎಂದರು.

ವಿಧಾನ ಪರಿಷತ್ತ ಸದಸ್ಯಶಶೀಲ್ ನಮೋಸಿ,ಎನ್.ಶಂಕ್ರಪ್ಪ ಸೇರಿ ಅನೇಕರು ಮಾತನಾಡಿದರು.

ಬಾಕ್ಸ್

ಜನಾಕ್ರೋಶ ಸಭೆ ನಿಮಿತ್ತ ನಗರದ ಚಂದ್ರಮೌಳೇಶ್ವರ ವೃತ್ತದಿಂದ ಹಳೆ ಜಿಲ್ಲಾಽಕಾರಿಗಳ ಕಚೇರಿವರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಅನೇಕ ನಾಯಕರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾದಯಾತ್ರೆ ಮಾಡುವ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ಕಾಶ್ಮೀರದಲ್ಲಿ ನಡೆದ ದಾಳಿಯಿಂದ ಕೇವಲ ವೇದಿಕೆ ಕಾರ್ಯಕ್ರಮ ಮಾಡಲಾಯಿತು. ನಂತರ ನಾಯಕರೆಲ್ಲರು ಮೇಣದ ಬತ್ತಿಯಿಡಿದು ಮೃತ ೨೮ ಜನರಿಗರೆ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಸಕ ಮಾನಪ್ಪ ವಜ್ಜಲ್,ಮಾಜಿ ಶಾಸಕ ಬಸವರಾಜ ದಡೇಸೂಗೂರು, ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ,ಮಾಜಿ ಸಂಸದರಾದ ಬಿ.ವಿ.ನಾಯಕ,ಕೆ.ವೀರುಪಾಕ್ಷಪ್ಪ, ಮುಖಂಡರಾದ ಸುನೀಲ್ ಕುಮಾರ, ತಿಪ್ಪರಾಜು ಹವಲ್ದಾರ್,ಪ್ರತಾಪ್ ಗೌಡ ಪಾಟೀಲ್ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net