

ರಾಯಚೂರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೪ನೇ ಜಯಂತಿ ಅಂಗವಾಗಿ ಕೋಮುವಾದಿ ದಿಕ್ಕರಿಸಿ ಸಂವಿಧಾನ ರಕ್ಷಿಸಿ ದಲಿತರ ಶ್ರೇಯಾ ಭಿವೃದ್ದಿಗಾಗಿ ಏ.೨೩ ರಂದು ಬೆಂಗಳೂರಿನ ಡಾ. ಬಾಬು ಜಗಜೀವನ ರಾಮ್ ಸಂಶೋಧನೆ ಕೇಂದ್ರದಲ್ಲಿ ಜನಕ್ರಾಂತಿ ಸಮಾವೇಶ ನಡೆಯಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮತಿ ರಾಜ್ಯ ಜಿ¯್ಲÁ ಸಂಚಾಲಕ ಹನುಮಂತಪ್ಪ ಕಾಕರಗಲ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನೇಕ ವರ್ಷಗಳಿಂದ ಗುಡ್ಡ ಗಾಡು ಪ್ರದೇಶದಲ್ಲಿ ಪಾಲು ಬಿದ್ದ ಜಮೀನುನ್ನು ಸಾಗುವಳಿ ಮಾಡಿ ಗೈರಾಣಿ ಜಮೀನ ಮೇಲೆ ಅವಲಂಬಿತ ರೈತರಿಗೆ ಬಗರ ಹುಕಂ ಅಡಿ ಯಲ್ಲಿ ಹಕ್ಕು ಪತ್ರ ನೀಡಬೇಕು.
ಎಸ್ಸಿ ಎಸ್ಟಿ ಅಭಿವೃದ್ಧಿ ಮೀಸಲಿರಿಸಿದ ೪೫ ಸಾವಿರ ಕೋಟಿ ರೂ. ಅನುದಾನ ಗ್ಯಾರಂಟಿ ಯೋಜನೆ ಗಳಿಗೆ ಬಳಕೆ ಮಾಡದೇ ದಲಿತ ಅಭಿವೃದ್ಧಿ ಹಣ ಬಳಕೆ ಮಾಡಬೇಕು ಎಂದು ರಾಜ್ಯ ಸರ್ಕಾರ ಕ್ರಾಂತಿ ಸಮಾವೇಶದಲ್ಲಿ ಒತ್ತಾಯಿಸಲಾಗುತ್ತಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪ ಅವರ ಜನ್ಮದಿನ ಜೂನ್ ೯೯ನ್ನು ರಜೆ ರಹಿತ ಸರ್ಕಾರ ಕಾರ್ಯಕ್ರಮವನ್ನಾಗಿ ಆಚರಿಸುವಂತೆ ಆದೇಶ ಹೊರಡಿಸಬೇಕು ಹಾಗೂ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಉಪ ಯೋಜನೆಯಡಿ ಒದಗಿಸುವ ಅನುದಾನ ದುರ್ಬಳಕೆ ತಡೆಯಲು ಸೆಕ್ಷನ್ ೭(ಈ) ರದ್ದುಪಡಿಸಿದಂತೆ, ಸೆಕ್ಷನ್
೭(ಇ)ಯನ್ನು ರದ್ದುಪಡಿಸಬೇಕೆಂದು ಕನಿಷ್ಠ ೧೫ ಬೇಡಿಕೆಯೊಂದಿಗೆ ಸಮಾವೇಶ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಹೈದರಾಲಿ, ರಮೇಶ, ನಾಗರಾಜ, ಮೌನೇಶ ದಿದ್ದಿಗಿ,ನಾಗರಾಜ, ಮಹದೇವ ಇದ್ದರು.