

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಜನಕೀಯ ಯೋಜನೆ 25 ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯಚಟುವಟಿಕೆ ಹಾಗೂ ಕಟ್ಟಡಗಳಲ್ಲೂ ಬದಲಾವಣೆ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿಗೆ ಹೊಸ ಕಟ್ಟಡ ಸಿದ್ಧಗೊಂಡಿದೆ. ನವ ಕೇರಳ ಸೃಷ್ಟಿ ಎಂಬುದು ಸಾರ್ವಜನಿಕ ಯೋಜನಾ ಚಟುವಟಿಕೆಗಳ ಮುಂದುವರಿದ ಭಾಗ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ ಕಾಸರಗೋಡು ಜಿಲ್ಲಾ ಪಂಚಾಯಿತಿ ಅನೆಕ್ಸ್ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ನೋಂದಣಿ ಮ್ಯೂಸಿಯಂ ಮತ್ತು ಪುರಾತತ್ವ ಖಾತೆ ಸಚಿವ ಕಡನಪಲ್ಲಿ ರಾಮಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಶಿಲ್ಪಿ ಕಾನಾಯಿ ಕುಞಿರಾಮನ್ ಅವರನ್ನು ಗೌರವಿಸಲಾಯಿತು. ಜಿಪಂ ಉಪಾಧ್ಯಕ್ಷ ಶಾನವಾಜ್ ಪಾದೂರು ಮುಖ್ಯಮಂತ್ರಿಯನ್ನು ಗೌರವಿಸಿದರು.
ದರ್ಪಣಂ ಯೋಜನೆ ಮಹಿಳಾ ಫಲಾನುಭವಿಗಳಿಗೆ ಕೌಶಲಾಭಿವೃದ್ಧಿ ತರಬೇತಿ ಪ್ರಮಾಣಪತ್ರವನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ವಿತರಿಸಿದರು. ಮಾನ್ಯತೆ ಪಡೆದ ಗ್ರಂಥಾಲಯಗಳಿಗೆ ಪುಸ್ತಕ ಪೀಠೋಪಕರಣಗಳನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಹಾಗೂ ಅಂಗವಿಕಲರಿಗಿರುವ ಸಹಾಯವನ್ನು ಶಾಸಕ ಎಂ.ರಾಜಗೋಪಾಲನ್, ಕುಟುಂಬಶ್ರೀ ತಂಡಗಳಿಗಿರುವ ಸಹಾಯಧನವನ್ನು ಶಾಸಕ ಇ.ಚಂದ್ರಶೇಖರನ್ ಹಾಗೂ ಅತ್ಯುತ್ತಮ ಬಿಎಂಸಿ ಪ್ರಕಟಣೆಯನ್ನು ಶಾಸಕ ಸಿಎಚ್.ಕುಞಂಬು ನಿರ್ವಹಿಸಿದರು. ಹೆಚ್ಚಿನ ಸಂಖ್ಯೆಯಲ್ಲಿರುವ ಹಸಿರು ಗ್ರಾಮ ಪಂಚಾಯಿತಿ ಘೋಷಣೆಯನ್ನು ಜಿಲ್ಲಾಧಿಕಾರಿ ಇನ್ಬಾಶೇಖರ್ ನೆರವೇರಿಸಿದರು. ಕಾಸರಗೋಡು ಜಿಪಂ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಸ್ವಾಗತಿಸಿದರು. ಹಣಕಾಸು ಅಧಿಕಾರಿ ಎಂ.ಎಸ್.ಶಬರೀಶ್ ವಂದಿಸಿದರು.