

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಕಲ್ಯಾಣ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಜಾನಕಿ ತೊರವಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿಠಲ ಚಲವಾದಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ ಮಾದಾರ, ಕೋಶಾಧ್ಯಕ್ಷರಾಗಿ ಸುಭಾಸ ಫುಲೆ, ಸಹ ಕಾರ್ಯದರ್ಶಿಯಾಗಿ ರವೀಂದ್ರ ಗಣಾಚಾರಿ, ಇಂದು ರವಿಕುಮಾರ, ಸಂಘಟನಾ ಕಾರ್ಯದರ್ಶಿಯಾಗಿ ಜ್ಞಾನಪ್ಪ ಚಲವಾದಿ, ಬೆನಕಪ್ರಸಾದ, ಶ್ರೀಕಾಂತ ಗಡೇದೇವರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಳಬತ್ತಿ, ಡಾ. ಶ್ರೀನಿವಾಸ ಕೊಸಗಿ, ಬಾಬು ಕಡಾಡಿ, ನವೀನಕುಮಾರ ನಾಗರಾಳ, ಎ.ಎಸ್. ದೊಡಮನಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.