ಜನಧನ್ ಬ್ಯಾಂಕ್ ಖಾತೆಯ ಅಕ್ರಮ 30 ಲಕ್ಷ ರೂ. ಮಾತ್ರ

sbi feb 07 2020
Published on

ಬೆಂಗಳೂರು: ಚನ್ನಪಟ್ಟಣದ ಮಹಿಳೆಯ ಜನಧನ್ ಬ್ಯಾಂಕ್ ಖಾತೆಯಲ್ಲಿ ವಹಿವಾಟು ನಡೆದಿದ್ದು 30 ಕೋಟಿ ರೂ. ಅಲ್ಲ. 30 ಲಕ್ಷ ರೂ. ಮಾತ್ರ. ಖಾತೆದಾರರು ಒನ್​ಟೈಮ್ ಪಾಸ್​ವರ್ಡ್ (ಒಟಿಪಿ) ನೀಡಿದ ಪರಿಣಾಮ ವ್ಯವಹಾರ ನಡೆದಿದೆ ಎಂದು ಎಸ್​ಬಿಐ ಪ್ರಧಾನ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ.

ಚನ್ನಪಟ್ಟಣದ ಹೂ ವ್ಯಾಪಾರಿ ರೆಹನಾಬಾನು ಅವರ ಜನಧನ್ ಬ್ಯಾಂಕ್ ಖಾತೆಯಲ್ಲಿ 30 ಕೋಟಿ ರೂ. ವಹಿವಾಟು ನಡೆದಿದೆ ಎಂಬ ಸುದ್ದಿ ಆಗಿತ್ತು. 2015ರ ಸೆ.12ರಂದು ಜನಧನ್ ಖಾತೆ ತೆರೆದಿದ್ದು, 3 ತಿಂಗಳ ಅವಧಿಯಲ್ಲಿ 30 ರಿಂದ 40 ಲಕ್ಷ ರೂ. ವಹಿವಾಟು ನಡೆದಿದೆ. ಈ ಬಗ್ಗೆ ಅನುಮಾನ ವ್ಯಕ್ತವಾದ ಕಾರಣ ಪಂಜಾಬ್, ಮಹಾರಾಷ್ಟ್ರ, ಉತ್ತರಪ್ರದೇಶದ ಸೈಬರ್ ಪೊಲೀಸರು ಮತ್ತು ಕರ್ನಾಟಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನೋಟಿಸ್ ಕೊಟ್ಟಿದ್ದು ವಿವರ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಪರಿಚಿತರೊಂದಿಗೆ ಒಟಿಪಿ ಹಂಚಿಕೊಂಡಿರುವುದಾಗಿ ಖಾತೆದಾರೆ ಮತ್ತು ಆಕೆಯ ಪತಿ ಹೇಳಿಕೆ ನೀಡಿದ್ದಾರೆ. ಇದನ್ನೇ ದುರುಪಯೋಗ ಪಡಿಸಿಕೊಂಡ ಸೈಬರ್ ಕಳ್ಳರು, ಜನಧನ್ ಖಾತೆಯಲ್ಲಿ ಅಕ್ರಮ ವಹಿವಾಟು ನಡೆಸಿರುವ ಸಾಧ್ಯತೆಗಳಿವೆ. ಇದರಲ್ಲಿ ನಮ್ಮ ಸಿಬ್ಬಂದಿ ಕೈವಾಡವಿಲ್ಲ. ಅನಾಮಧೇಯ ವ್ಯಕ್ತಿಗಳಿಗೆ ಒಟಿಪಿ ನೀಡಬಾರದು. ಈ ಬಗ್ಗೆ ಪ್ರತಿಯೊಬ್ಬರ ಮೊಬೈಲ್​ಗೆ ಎಸ್​ಎಂಎಸ್ ಕಳುಹಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಎಸ್​ಬಿಐ ಪ್ರಧಾನ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net