ಮಧ್ಯವರ್ತಿಗಳನ್ನು ದೂರವಿಟ್ಟಿದೆ ಜನ್​ಧನ್

New Joshi New 111
Published on

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರು ಜಾರಿ ತಂದ ಜನ್​ಧನ್ ಖಾತೆ ಯೋಜನೆ ಮಧ್ಯವರ್ತಿಗಳನ್ನು ದೂರವಿಡುವಲ್ಲಿ ಸಫಲವಾಗಿದೆ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಹೇಳಿದರು.

ಶಿಗ್ಗಾಂವ-ಸವಣೂರ ವಿಧಾನಸಭಾ ಕ್ಷೇತ್ರದ ಬನ್ನೂರು, ಕ್ಯಾಲ್ಕೊಂಡ, ಬಸವನಾಳ ಮತ್ತು ಅತ್ತಿಗೇರಿ ಗ್ರಾಮಗಳಲ್ಲಿ ಶನಿವಾರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಜನ್​ಧನ್ ಖಾತೆಯಿಂದ ಬಡವರಿಗೆ ನೇರವಾಗಿ ಪಿಂಚಣಿ, ವಿಮೆ, ಠೇವಣಿ, ಉಳಿತಾಯ ಸೇವೆ, ಸೌಲಭ್ಯ ಪಡೆಯಲು ಅನುಕೂಲವಾಗಿದೆ ಎಂದರು.

ದೇಶದ ಕೋಟ್ಯಂತರ ಬಡವರು ವಿವಿಧ ಸೇವೆ ಪಡೆಯಲು ಮಧ್ಯವರ್ತಿಗಳನ್ನು ಅವಲಂಬಿಸುವುದು ತಪ್ಪಿದೆ. ನೇರವಾಗಿ ಜನರ ಖಾತೆಗೆ ಸೌಲಭ್ಯ ವರ್ಗಾವಣೆ ಆಗುತ್ತಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಬಡವರ ಪಾಲಿನ ಬಂಧುವಾಗಿದ್ದಾರೆ. ಇಂಥ ನಾಯಕತ್ವ ಗುಣವುಳ್ಳ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯಾಗಿಸಬೇಕಿದೆ. ಇದಕ್ಕಾಗಿ ಎಲ್ಲರೂ ಬಿಜೆಪಿಗೆ ಮತದಾನ ಮಾಡುವ ಮೂಲಕ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net