ಮೈಸೂರು: ನಗರದ ಜನ ಚೈತನ್ಯ ಫೌಂಡೇಷನ್, ಪಿ.ಮಣಿವಣ್ಣನ್ ಐಎಎಸ್ ಅಭಿಮಾನಿ ಬಳಗದಿಂದ ನ.29ರಂದು ಜಯಹೇ ಕರ್ನಾಟಕ ಸಂಗೀತ ಕಾರ್ಯಕ್ರಮ, ಸಾಧಕರಿಗೆ ಜನಚೈತನ್ಯ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಆರ್.ಲಕ್ಷ್ಮಣ್ ತಿಳಿಸಿದರು.
ಜೆಎಲ್‌ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಭಾಂಗಣದಲ್ಲಿ ಅಂದು ಸಂಜೆ 4ಕ್ಕೆ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಹಾಗೂ ಪಿ.ಮಣಿವಣ್ಣನ್ ಜನ್ಮ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 16 ಸಾಧಕರಿಗೆ ಜನಚೈತನ್ಯ ಪುರಸ್ಕಾರ ನೀಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮೇಯರ್ ನಾರಾಯಣ, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಮುನಿರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಇತರರು ಭಾಗವಹಿಸಲಿದ್ದಾರೆ ಎಂದರು.
ಸಂಗೀತ ಕಾರ್ಯಕ್ರಮದಲ್ಲಿ ಗಾಯಕರಾದ ಡಾ.ಕೆ.ಎ.ಕೆ.ಸುರೇಂದ್ರನ್, ಎಸ್.ಆರ್.ತಿರುಮಲೇಶ್, ಜಾಯ್ಸ ಪೀಟರ್, ಎನ್. ಲೋಕೇಶ್, ಉಮೇಶ್, ಸತ್ಯವತಿ, ಶಿವಕುಮಾರ್, ಸುರೇಶ್ ಕಾವಾ, ಬಬಿತಾ, ಆದಿಲ್ ಪಾಷ ಹಾಡಲಿದ್ದಾರೆ ಎಂದರು.
ಕೀಬೋರ್ಡ್ ವಾದಕ ವೆಂಕಟಸ್ವಾಮಿ, ಜೈ ಭುವನೇಶ್ವರಿ ಟ್ರಸ್ಟ್ ಅಧ್ಯಕ್ಷ ತಿಪ್ಪಯ್ಯ, ಚಲನಚಿತ್ರ ನಿರ್ದೇಶಕ ಮೈಸೂರು ರಾಜು, ನಿರ್ಮಾಪಕಿ ನಾಗರತ್ನಮ್ಮ, ಸಮಾಜ ಸೇವಕ ರಾಜಣ್ಣ ಇದ್ದರು.