

ವಿಜಯವಾಣಿ ಸುದ್ದಿಜಾಲ ಗದಗ
ಜಮ್ಮು ಕಾಶ್ಮೀರದ ಭಯೋತ್ಪಾದನಾ ಕೃತ್ಯ ಖಂಡಿಸಿ ತಪ್ಪಿತಸ್ಥರ ಮೇಲೆ ಉಗ್ರ ಕೈಗೊಳ್ಳಬೇಕೆಂದು ವಿಶ್ವಹಿಂದೂ ಪರಿಷತ್ ಜಿಲ್ಲಾ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯ ಶ್ರೀಧರ ಕುಲಕಣಿರ್, ಜೂ. 9 ರಂದು ಜಮ್ಮು ಕಾಶ್ಮೀರದಲ್ಲಿ ವೈಷ್ಣೋದೇವಿ ಕತ್ರಾದಿಂದ ಶಿವಖೋಡಿಗೆ ಸಂಚರಿಸುತ್ತಿದ್ದ ಹಿಂದೂ ಭಕ್ತರ ಬಸ್ಸಿನ ಮೇಲೆ ಪಾಕಿಸ್ತಾನ ಪೋಷಿತ ಇಸ್ಲಾಮಿಕ್ ಜಿಹಾದಿ ಭಯೋತ್ಪಾದಕರ ಕೃತ್ಯವನ್ನು ನಡೆಸಿದ್ದು, ಇದರಲ್ಲಿ 10 ಹಿಂದೂ ಯಾತ್ರಿಕರು ಮರಣ ಹೊಂದಿದ್ದಾರೆ. ಸುಮಾರು ನಲವತ್ತು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಕೃತ್ಯದಿಂದ ಸಂರ್ಪೂಣ ದೇಶ ಆಘಾತಗೊಂಡಿದೆ. ಇಂತಹ ಹೇಯ ಕೃತ್ಯ ಎಸಗಿದ ಇಸ್ಲಾಮಿಕ್ ಭಯೋತ್ಪಾದಕರು ದೇಶದ ಸ್ವಾಯತ್ತತೆಗೆ ಸವಾಲವನ್ನು ನೀಡಿದಂತಾಗಿದೆ. ಕೇಂದ್ರ ಸರ್ಕಾರ ಭಯೋತ್ಪಾದಕ ಕೃತ್ಯಗಳಿಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ರಾಷ್ಟ್ರಪತಿಗಳು ನಿರ್ದೇಶಿಸಬೇಕು ಎಂದು ಹೇಳಿದರು.
ಮಾರುತಿ ಪವಾರ, ಪಿ. ಆರ್. ಇನಾಮದಾರ, ಸುಧೀರ ಕಾಟಿಗರ, ವಿಲಾಸ ಕೊಪ್ಪಳ, ಬಸವರಾಜ ಬೆಳವಟಗಿ, ಸಚಿನ ಸಾಬಳೆ, ಗಣೇಶ ಸುಲ್ತಾನಪುರ ಇದ್ದರು.