ಜಮ್ಮಾ ಮಲೆ ಬಗ್ಗೆ ಸಚಿವರ ಸಮ್ಮುಖದಲ್ಲಿ ಚರ್ಚೆ

jamma
Published on

ಮಡಿಕೇರಿ:

ಕೊಡಗಿನಲ್ಲಿ ಜಮ್ಮಾಮಲೆ, ಸಿ ಮತ್ತು ಡಿ, ಜಮೀನು ಹಾಗೂ ವನ್ಯ ಜೀವಿ ಸಂಘರ್ಷಗಳ ಬಗ್ಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಕಚೇರಿಯಲ್ಲಿ ಶುಕ್ರವಾರ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾ ಎನ್.ಎಸ್. ಬೋಸರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕÀ ಡಾ. ಮಂತರ್ ಗೌಡ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು.

ಈ ವೇಳೆ ಮಾತನಾಡಿದ ಎ. ಎಸ್. ಪೊನ್ನಣ್ಣ, ಜಮ್ಮಾಮಲೆ ಹಿಡುವಳಿದಾರರ ಆಸ್ತಿ ಹಕ್ಕು ರಕ್ಷಣೆ ಮತ್ತು ಅವರಿಗೆ ನ್ಯಾಯ ದೊರಕಬೇಕು ಎಂದು ನ್ಯಾಯಾಲಗಳಲ್ಲಿ ಆದೇಶವಾಗಿದೆ. ಈ ಬಗ್ಗೆ ಶ್ರೀಘ್ರವಾಗಿ ಕ್ರಮವಹಿಸಬೇಕಿದೆ ಎಂದರು.

ಸಿ ಮತ್ತು ಡಿ ಲ್ಯಾಂಡ್ ಬಗ್ಗೆ ಜಂಟಿ ಸರ್ವೆ ಮಾಡಿ ಹಿಡುವಳಿದಾರರಿಗೆ ನ್ಯಾಯ ಒದಗಿಸಬೇಕು. ಕೊಡಗು ಜಿಲ್ಲೆಯಲ್ಲಿ ಆನೆಗಳ ಹಾವಳಿಯಿಂದ ಮಾನವನ ಪ್ರಾಣ ಹಾನಿ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಬೇಕು. ಆನೆ ಮತ್ತು ಹುಲಿ ನಿರಂತರ ದಾಳಿಯಿಂದ ಕೊಡಗಿನ ರೈತಾಪಿ ಜನರ ಜೀವನ ಹಾನಿ ಉಂಟಾಗುತ್ತಿದೆ. ಕೃಷಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಹುಲಿ ಮತ್ತು ಆನೆಗಳನ್ನು ಸ್ಥಳಾಂತರಿಸಿ ಜೀವ ಹಾನಿ ಉಂಟಾಗುವುದನ್ನು ಅಧಿಕಾರಿಗಳು ಶೀಘ್ರವಾಗಿ ತಡೆಗಟ್ಟಬೇಕೆಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಖಂಡ್ರೆ ಅಧಿಕಾರಿಗಳು ಕೂಡಲೇ ಮಾನವ ಪ್ರಾಣ ಹಾನಿಯಾಗದಂತೆ ಕ್ರಮ ವಹಿಸಿ, ಜನರಿಗೆ ಧೈರ್ಯ ತುಂಬ ಬೇಕು. ನಿರಂತರವಾಗಿ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಅರಿವು ಮಾಡಿಸಲು ಕಾರ್ಯಪ್ರವೃತ್ತರಾಗಬೇಕು. ಅಗತ್ಯ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು, ಜಮ್ಮಾ ಮಲೆ ಅಸೋಷಿಯೇಷನ್ ಪದಾಧಿಕಾರಿಗಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net