

ಗೋಕಾಕ: ದಿ. ಗೋಕಾಕ ಅರ್ಬನ್ ಕೋ&ಆಪರೇಟಿವ್ ಕ್ರೆಡಿಟ್ ಬ್ಯಾಂಕ್ 118 ವರ್ಷ ಪೂರೆಸಿ ಅಭಿವದ್ಧಿ ಪಥದತ್ತ ಮುನ್ನಡೆಯುತ್ತಿದೆ ಎಂದು ಬ್ಯಾಂಕ್ನ ಹಿರಿಯ ನಿರ್ದೇಶಕ ಎಂ.ಡಿ.ಚುನಮರಿ ಹೇಳಿದರು.
ನಗರದ ದಿ. ಗೋಕಾಕ ಅರ್ಬನ್ ಕೋ&ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಜ.1ರಂದು ಬ್ಯಾಂಕಿನ 7ನೇ ಶಾಖೆಯನ್ನು ಜಮಖಂಡಿ ಪಟ್ಟಣದಲ್ಲಿ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಹಾಗೂ 2ರಂದು ಬ್ಯಾಂಕ್ನ 8ನೇ ಶಾಖೆಯನ್ನು ಮುಧೋಳ ಪಟ್ಟಣದಲ್ಲಿ ವೇದಮೂರ್ತಿ ಚಂದ್ರಶೇಖರ ಸ್ವಾಮೀಜಿ ಅಮತ ಹಸ್ತದಿಂದ ಉದ್ಘಾಟಿಸಲಾಗುತ್ತದೆ. ಸದ್ಯದಲ್ಲೇ ಬೆಳಗಾವಿ ನಗರದಲ್ಲಿಯೂ ಶಾಖೆ ಆರಂಭಿಸಲಾಗುವುದು ಎಂದು ತಿಳಿಸಿದರು.
ಬ್ಯಾಂಕ್ನ ಅಧ್ಯ ಬಸವರಾಜ ಕಲ್ಯಾಣಶೆಟ್ಟಿ , ಉಪಾಧ್ಯ ಸುಧೀರ ಅಂಕಲಿ, ನಿರ್ದೇಶಕರಾದ ಜಯಾನಂದ ಮುನವಳ್ಳಿ, ವೀರಣ್ಣ ಬಿದರಿ, ದುಂಡಪ್ಪ ಬಿದರಿ, ಮಹಾಂತೇಶ ಕಲ್ಲೋಳಿ, ರಾಜಶೇಖರ ತಾರಳಿ, ಶಾಂತಾ ೂಡಗೇರಿ, ಚಂದ್ರಕಾಂತ ಕುರಬೇಟ, ಶ್ರೀಕಾಂತ ಪಟ್ಟಣಶೆಟ್ಟಿ ಹಾಗೂ ಪ್ರಧಾನ ವ್ಯವಸ್ಥಾಪಕ ಶಿವನಗೌಡ ಪಾಟೀಲ ಇದ್ದರು.