ಇಂದಿನಿಂದ ಜಮಖಂಡಿ ನಗರ ದಿಗ್ವಿಜಯ

Jamkhandi Nagar Digvijaya from today
ಸತ್ಯಾತ್ಮತೀರ್ಥ ಶ್ರೀಪಾದಂಗಳವರು
Published on

ಜಮಖಂಡಿ: ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಜೂ.7 ರಿಂದ ಜೂ.9 ವರೆಗೆ ಮೂರು ದಿನಗಳಕಾಲ ಜಮಖಂಡಿ ನಗರದ ದಿಗ್ವಿಜಯ ಕೈಗೊಳ್ಳಲಿದ್ದಾರೆ.

ಜೂ.7 ರಂದು ಏಕಾದಶಿ ಪ್ರಯುಕ್ತ ನಗರದ ದ್ವಾರಕಾನಾಥ ಮಂದಿರದಲ್ಲಿ ಸಂಸ್ಥಾನ ಪೂಜೆ ನೆರವೇರಿಸಲಿದ್ದಾರೆ. ನಂತರ ತಪ್ತ ಮುದ್ರಾಧಾರಣೆ, ಪಂಡಿತರಿಂದ ಭಾಗವತ ಪ್ರವಚನ ಏರ್ಪಡಿಸಲಾಗಿದೆ.

ಜೂ.8 ದ್ವಾದಶಿ ಬೆಳಿಗ್ಗೆ, ಸಂಸ್ಥಾನ ಪೂಜೆ, ಮಹಾಪ್ರಸಾದ ಸಂಜೆ ಶ್ರೀಗಳಿಂದ ಭಾಗವತ ಮಂಗಳ ಕಾರ್ಯಕ್ರಮ ಇದೆ. ಅಖಂಡ ಭಾಗವತ ಪ್ರವಚನ ಪಂಡಿತರಾದ ಪ್ರಸನ್ನಾಚಾರ್ಯ ಮೊಕಾಶಿ, ಪ್ರಾಣೇಶಾಚಾರ್ಯ ಮೊಕಾಶಿ, ಪವನಾಚಾರ್ಯ ಜೋಷಿ, ಬಿಂದಾಚಾರ್ಯ ಜೋಷಿ, ಸುಜಯಾಚಾರ್ಯ, ಅನಿರುದ್ಧಾಚಾರ್ಯ, ಅಜಯ ಆಚಾರ್ಯ, ಅಜಿತಾಚಾರ್ಯ, ಭೀಮಸೇನಾಚಾರ್ಯ, ಬಿಂದಾಚಾರ್ಯ ನಾಗಸಂಪಿಗೆ, ರಂಗಾಚಾರ್ಯ ಜೋಷಿ ನಡೆಸಿಕೊಡಲಿದ್ದಾರೆ.

ಜೂ.9ರಂದು ಸಾಬಡೆಗಲ್ಲಿಯ ರಘೋತ್ತಮರಾಯರ ಮಠದಲ್ಲಿ ಶ್ರೀಸತ್ಯಪ್ರಮೋದ ತೀರ್ಥರ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನೆ, ಕುಂಭಾಭೀಷೇಕ, ಸಂಸ್ಥಾನ ಮಹಾಪೂಜೆ ಮಧ್ಯಾಹ್ನ ಮಹಾಪ್ರಸಾದ ಇರುತ್ತದೆ. ಮೂರು ದಿನಗಳ ವರೆಗೆ ನಡೆಯಲಿರುವ ಕಾರ್ಯಕ್ರಮಕ್ಕೆ ಭಗವದ್ ಭಕ್ತರು ಆಗಮಿಸಿ ಹರಿ, ವಾಯು, ಗುರುಗಳ ಕೃಪೆಗೆ ಪಾತ್ರರಾಗಲು ವಿಶ್ವಮಧ್ವ ಮಹಾಪರಿಷತ್, ರಘೋತ್ತಮರಾಯರ ಮಠದ ಜೀರ್ಣೋದ್ಧಾರ ಸಮಿತಿಯ ಸಂಚಾಲಕ ರಂಗಾಚಾರ್ಯ ಜೋಷಿ, ಅಧ್ಯಕ್ಷ ನಿತಿನ ಹುಲ್ಯಾಳಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net