ಸಾಮಾಜಿಕ ಕಾರ್ಯದ ಮೂಲಕ ಜಮೀರ್ ಜನ್ಮದಿನ

1 ckm 1
ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಸಚಿವ ಜಮೀರ್ ಅಹಮದ್ ಅವರ ಜನ್ಮ ದಿನದ ಅಂಗವಾಗಿ ಅಭಿಮಾನಿ ಬಳಗದಿಂದ ಅನ್ನಸಂತರ್ಪಣೆ ನಡೆಸಲಾಯಿತು. ಮಹಮ್ಮದ್ ಶಾಹೀದ್ ರಜ್ವಿ, ಹಾಜಿ ಫೈರೋಜ್ ಅಹಮದ್ ರಜ್ವಿ, ಜಂಶೀದ್ ಖಾನ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ವಕ್ಫ್ ಮತ್ತು ವಸತಿ ಸಚಿವ ಬಿ.ಝಡ್.ಜಮೀರ್‌ಅಹ್ಮದ್ ಖಾನ್ ಜನ್ಮ ದಿನದ ಅಂಗವಾಗಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯಿಂದ ಬಡಮಕಾನ್‌ನಲ್ಲಿ ಪ್ರಾರ್ಥನೆ, ರಕ್ತದಾನ ಹಾಗೂ ಸರ್ಕಾರಿ ಆಸ್ಪತ್ರೆಯ ಬಡರೋಗಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಿ ಹುಟ್ಟುಹಬ್ಬವನ್ನು ಗುರುವಾರ ಅರ್ಥ ಪೂರ್ಣವಾಗಿ ಮುಖಂಡರುಗಳು ಆಚರಿಸಿದರು.

ಈ ವೇಳೆ ಮಾತನಾಡಿದ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮಹಮ್ಮದ್ ಶಾಹೀದ್ ರಜ್ವಿ, ಪ್ರತಿ ವರ್ಷದಂತೆ ಈ ಬಾರಿಯು ಜಮೀರ್‌ಅಹ್ಮದ್ ಅವರ ಜನ್ಮದಿನವನ್ನು ಸಾಮಾಜಿಕ ಕಾರ್ಯದ ಜೊತೆಗೆ ಆಚರಿಸಿz್ದೆÃವೆ. ಮುಂದಿನ ಅವರ ರಾಜಕೀಯ ಜೀವನದಲ್ಲಿ ಉನ್ನತಿ ಹಾಗೂ ಯಶಸ್ಸು ಲಭಿಸಿ ಉನ್ನತ ಸ್ಥಾನಮಾನ ಲಭಿಸುವಂತಾಗಲಿದೆ ಎಂದು ಆಶಿಸಿದರು.
ಜನ್ಮದ ಅಂಗವಾಗಿ ನಗರದ ಬಡಾ ಮಕಾನ್‌ನಲ್ಲಿ ವಿಶೇಷÀ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಮಧ್ಯಾಹ್ನ ಜಿಲ್ಲಾ ಆಸ್ಪತ್ರೆಯಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಸೀದಿ ಗುರುಗಳಿಂದ ಸಚಿವರಿಗೆ ದೀರ್ಘಯಸ್ಸು ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷÀ ಹಾಜಿ ಫೈರೋಜ್ ಅಹಮದ್ ರಜ್ವಿ, ಟಿಪ್ಪು ಅಭಿಮಾನಿಗಳ ವೇದಿಕೆ ಅಧ್ಯಕ್ಷ ಜಂಶೀದ್ ಖಾನ್, ಕಾಂಗ್ರೆಸ್ ಪಕ್ಷದ ಬ್ಲಾಕ್ ಉಪಾಧ್ಯಕ್ಷ ಬಾಬು, ಸರ್ದಾರ್, ಜಮೀರ್ ಅಹಮದ್ ಖಾನ್ ಅಭಿಮಾನಿ ಬಳಗದ ನಾಸೀರ್, ಗುಲ್ಫಾಮ್, ಶಹಾಬುದ್ದೀನ್, ಹಾಫೀಜ್ ಇರ್ಫಾನ್, ಹಾಫೀಜ್ ರಿಯಾಜ್, ಜಾಮಿಯಾ ಮಸೀದಿ ಅಧ್ಯಕ್ಷ ಮುದಾಸೀರ್ ಪಾಷಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net