ಆರೇ ತಿಂಗಳಲ್ಲಿ ಸಿಸಿ ರಸ್ತೆ ಹಾಳು

Harapanahalli Protst
ಜಂಬುಲಿಂಗನಹಳ್ಳಿ, ಆರೇ ತಿಂಗಳಲ್ಲಿ, ಸಿಸಿ ರಸ್ತೆ, ಹಾಳು, ಪ್ರತಿಭಟನೆ, Jambulinganahalli, In six months, CC road, damage, protest
Published on

ಹರಪನಹಳ್ಳಿ: ಜಂಬುಲಿಂಗನಹಳ್ಳಿ ಗ್ರಾಮದ ಮೂಲಕ ಹಾದುಹೋಗಿರುವ ಹರಪನಹಳ್ಳಿ-ದಾವಣಗೆರೆ ಸಿಸಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಆರೋಪಿಸಿ ಸ್ಥಳೀಯರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಆರು ತಿಂಗಳದ ಹಿಂದೆ ಎರಡು ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿದ್ದ ಸಿ.ಸಿ.ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿತ್ತು. ನಂತರ ಮತ್ತೆ ಗುಂಡಿಗಳನ್ನು ಮುಚ್ಚಿ ಸರಿಪಡಿಸಲಾಗಿತ್ತು. ಈಗ ರಸ್ತೆಯು ಸಂಪೂರ್ಣ ಹದಗೆಟ್ಟು ವಾಹನಗಳ ಓಡಾಟದಿಂದ ವಿಪರೀತ ಧೂಳು ಏಳುತ್ತಿದ್ದು, ಸ್ಥಳೀಯ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಪಿಡಬ್ಲುೃಡಿ ಎಇಇ ಪ್ರಕಾಶ್ ಪಟೇಲ್ ಮಾತನಾಡಿ, ನಾನು ಹೊಸದಾಗಿ ಬಂದಿದ್ದೇನೆ. 15 ದಿನಗಳ ಒಳಗೆ ರಸ್ತೆಯನ್ನು ದುರಸ್ತಿ ಮಾಡಿಸಲಾಗುವುದು. ಸದ್ಯ ತಾತ್ಕಾಲಿಕವಾಗಿ ಧೂಳು ಏಳದಂತೆ ರಸ್ತೆಗೆ ನೀರು ಸಿಂಪಡಿಸಲಾಗುವುದು ಎಂದು ತಿಳಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.

ನ.10-ಎಚ್‌ಆರ್‌ಪಿ-1
ಹರಪನಹಳ್ಳಿ ತಾಲೂಕಿನ ಜಂಬುಲಿಂಗನಹಳ್ಳಿ ಗ್ರಾಮಸ್ಥರು ಶುಕ್ರವಾರ ಪಿಡಬ್ಲುೃಡಿ ಎಇಇ ಪ್ರಕಾಶ ಪಾಟೀಲ್‌ಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಎಚ್.ಬಿ.ಮಂಜುನಾಥ್, ಕುಬೇರಪ್ಪ, ನಾಗರಾಜ್, ಅಡಿವೆಪ್ಪ, ಎಚ್.ನಾಗಪ್ಪ, ಪಿ.ಜಿ.ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net