ಮಾರುಕಟ್ಟೆಗೆ ಲಗ್ಗೆ ಇಟ್ಟ ಜಂಬು ನೇರಳೆ

ಲಿಂಗಸುಗೂರಿನಲ್ಲಿ ಜಂಬು ನೇರಳೆ ಹಣ್ಣು ಖರೀದಿಸುತ್ತಿರುವ ಗ್ರಾಹಕರು.
ಲಿಂಗಸುಗೂರಿನಲ್ಲಿ ಜಂಬು ನೇರಳೆ ಹಣ್ಣು ಖರೀದಿಸುತ್ತಿರುವ ಗ್ರಾಹಕರು.
Published on

ಲಿಂಗಸುಗೂರು: ಜೂನ್ ಶುರುವಾಗುತ್ತಿದ್ದಂತೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಕಪ್ಪು ಸುಂದರಿ ನೇರಳೆ ಹಣ್ಣಿಗೆ ಬೇಡಿಕೆ ಹೆಚ್ಚಿದೆ.

ಪಟ್ಟಣದ ಬಸ್ ನಿಲ್ದಾಣ ಸರ್ಕಲ್, ಗಡಿಯಾರ ಚೌಕ್, ಪದವಿ ಪೂರ್ವ ಕಾಲೇಜಿನ ಮುಂದೆ ತಳ್ಳುವ ಗಾಡಿಗಳಲ್ಲಿ ವ್ಯಾಪಾರ ಮಾಡುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾರಾಟ ಮತ್ತು ಖರೀದಿ ಹೆಚ್ಚಾಗಿದೆ. ನೇರಳೆ ಹಣ್ಣಿನಲ್ಲಿ ಜವಾರಿ (ನಾಟಿ) ಹಾಗೂ ಜಂಬು ನೇರಳೆ ಎಂಬ ಎರಡು ತಳಿಗಳಿವೆ. ಜಂಬು ನೇರಳೆ ಗಾತ್ರದಲ್ಲಿ ದೊಡ್ಡದಾಗಿದ್ದು, ಕೊಂಡುಕೊಳ್ಳುವವರು ಹೆಚ್ಚು. ಜವಾರಿ ನೇರಳೆ ಈ ಬಾರಿ ಇಳುವರಿಯಲ್ಲಿ ಕಡಿಮೆಯಾಗಿದೆ. ಒಂದು ಕೆಜಿಗೆ 180 ರೂ.ದಿಂದ 200 ರೂ. ಬೆಲೆ ಇದೆ.

ಹಣ್ಣಿನ ಗಿಡದ ಬೇರು, ಎಲೆ, ಬೀಜ, ತೊಗಟೆ ಎಲ್ಲವೂ ಔಷಧ ಗುಣ ಹೊಂದಿದ್ದು, ಹಲವು ಕಾಯಿಲೆಗಳನ್ನು ಗುಣಪಡಿಸುತ್ತದೆ.. ಆಯುರ್ವೇದದಲ್ಲಿ ಔಷಧವಾಗಿ ಬಳಸುತ್ತಾರೆ. ರಕ್ತದೊತ್ತಡ, ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುತ್ತದೆ. ಜಂಬು ನೇರಳೆ ಈ ಭಾಗದಲ್ಲಿ ಬೆಳೆಯುವುದಿಲ್ಲ. ಆದ್ದರಿಂದ ವ್ಯಾಪಾರಿಗಳು ಬೆಳಗಾವಿಯಿಂದ ತರಿಸಿ ಇಲ್ಲಿ ಮಾರಾಟ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net