ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯ; ಭಾರತೀಯ ಹಬ್ಬಗಳಲ್ಲಿ ನವರಾತ್ರಿಗೆ ವಿಶೇಷ ಸ್ಥಾನ

12 Dwd 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯ ಪರಂಪರೆಯಲ್ಲಿ ಹಲವಾರು ಹಬ್ಬಗಳನ್ನು ಆಚರಿಸುತ್ತ ಬರಲಾಗುತ್ತಿದೆ. ಅದರಲ್ಲಿ ನವರಾತ್ರಿಗೆ ವಿಶೇಷ ಸ್ಥಾನವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿನ ಗಾಂಽನಗರದ ಈಶ್ವರ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಂಬೂಸವಾರಿ ಮೆರವಣಿಗೆಯ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನವರಾತ್ರಿ ಸಂದರ್ಭದಲ್ಲಿ ದೇವಿಯನ್ನು ವಿವಿಧ ರೂಪದಲ್ಲಿ ಅಲಂಕರಿಸಿ ಆರಾಽಸುವುದು ಸಂಪ್ರದಾಯ. ಪ್ರತಿ ಆರಾಧನೆಗೂ ಒಂದು ಮಹತ್ವವಿದೆ. ನವರಾತ್ರಿ ಹಬ್ಬದ ಜಂಬೂಸವಾರಿಗೆ ಪೌರಾಣಿಕ ಹಿನ್ನೆಲೆ ಇದೆ. ಮೈಸೂರಲ್ಲಿ ನಡೆಯುವ ದಸರಾ ವೈಭವಕ್ಕೆ ಶ್ರೀಮಂತ ಪರಂಪರೆ ಇದೆ. ಅದೇ ಮಾದರಿಯಲ್ಲಿ ಧಾರವಾಡದಲ್ಲಿಯೂ ದಸರಾ ಜಂಬೂಸವಾರಿ ಆಯೋಜಿಸುವ ಮೂಲಕ ಸಾಂಸ್ಕೃತಿಕ ವೈಭವವನ್ನು ಹೆಚ್ಚಿಸಲಾಗಿದೆ ಎಂದರು.
ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನದ ಶ್ರೀ ಶಿವಾನಂದ ಶಿವಯೋಗಿ ರಾಜಯೋಗಿಂದ್ರ ಮಹಾಸ್ವಾಮೀಜಿ ಮತ್ತು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮೀಜಿ ಸಾನ್ನಿ ಧ್ಯ ವಹಿಸಿದ್ದರು.
ಹೆಬ್ಬಳ್ಳಿ ಬ್ರಹ್ಮಚೈತನ್ಯ ಮಠದ ಶ್ರೀ ದತ್ತಾವಧೂತರು, ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ, ಹಂಡಿಬಡಗನಾಥ ಕಾರ್ಯಭಾರಿ ಶ್ರೀ ಯೋಗಿ ಸಾಗರನಾಥ ಮಹಾರಾಜರು, ಹುನಗುಂದ ಮಠದ ಶ್ರೀ ವೀರೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು.
ಧಾರವಾಡ ದಸರಾ ಜಂಬೂಸವಾರಿ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಶಿಮರದ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಂ.ಆರ್. ಪಾಟೀಲ, ಪ್ರಕಾಶ ಕೋಳಿವಾಡ, ಮಾಜಿ ಸಚಿವ ಹನಮಂತಪ್ಪ ಅಲ್ಕೋಡ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಇತರರಿದ್ದರು.
ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಕೋಪರ್ಡೆ, ಪುರುಷೋತ್ತಮ ಪಟೇಲ, ಮಂಜುಗೌಡ ಪಾಟೀಲ, ಪಿ.ಎಚ್. ಕಿರೇಸೂರ, ವಿಲಾಸ ತಿಬೇಲಿ, ರಾಜೇಂದ್ರ ಕಪಲಿ, ಯಶವಂತರಾವ ಕದಂ, ಮನೋಜ ಸಂಗೊಳ್ಳಿ, ಮಂಜುಳಾ ಮುಂಜಿ, ಮಡಿವಾಳಪ್ಪ ಸಿಂಧೋಗಿ ಮತ್ತು ವಿವಿಧ ಮಹಿಳಾ ಮಂಡಳ ಪದಾಽಕಾರಿಗಳು ಉತ್ಸವದ ಯಶಸ್ವಿಗೆ ಶ್ರಮಿಸಿದರು.
ನಂತರ ಈಶ್ವರ ದೇವಸ್ಥಾನದಿಂದ ಆರಂಭವಾದ ಜಂಬೂಸವಾರಿ ಮೆರವಣಿಗೆಯು ಕಲಘಟಗಿ ರಸ್ತೆ ಮೂಲಕ ವಿವಿಧೆಡೆ ಸಂಚರಿಸಿ ಕಡಪಾ ಮೈದಾನ ತಲುಪಿ ಮುಕ್ತಾಯಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net