

ಯಲ್ಲಾಪುರ: ತಾಲೂಕಿನ ಮಾಗೋಡ ಕಾಲನಿಯಲ್ಲಿ ಸಾರ್ವಜನಿಕ ಗಜಾನನೋತ್ಸವದ ಪ್ರಯುಕ್ತ ಶನಿವಾರ ರಾತ್ರಿ ಮಾಗೋಡಿನ ಶ್ರೀ ವಿನಾಯಕ ಯಕ್ಷಮಿತ್ರ ಬಳಗದ ಕಲಾವಿದರಿಂದ ಜಾಂಬವತಿ ಕಲ್ಯಾಣ ತಾಳಮದ್ದಲೆ ಜರುಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಮಹಾಬಲೇಶ್ವರ ಭಟ್ಟ ಬೆಳಶೇರ, ಗೋಪಾಲಕೃಷ್ಣ ಭಟ್ಟ ಮೊಟ್ಟೆಪಾಲ, ಮದ್ದಲೆವಾದಕರಾಗಿ ನಾಗಪ್ಪ ಕೋಮಾರ, ಸಂಜಯ ಕೋಮಾರ ಭಾಗವಹಿಸಿದ್ದರು. ಕೃಷ್ಣನಾಗಿ ನರಸಿಂಹ ಭಟ್ಟ ಕುಂಕಿಮನೆ, ಬಲರಾಮನಾಗಿ ಮಂಜುನಾಥ ಜೋಶಿ ಮಾಗೋಡ, ಜಾಂಬವನಾಗಿ ಶ್ರೀಧರ ಅಣಲಗಾರ, ನಾರದನಾಗಿ ಗೋಪಾಲಕೃಷ್ಣ ಭಟ್ಟ ಕುಂಕಿಪಾಲ, ಜಾಂಬವತಿಯಾಗಿ ಶ್ರೀವತ್ಸ ಬಟ್ಲಗುಂಡಿ ಪಾತ್ರ ನಿರ್ವಹಿಸಿದರು.