

ಜಮಖಂಡಿ: ನಗರದ ಪಿಬಿ ಹೈಸ್ಕೂಲ್‌ನ 25 ಕೊಠಡಿಗಳಲ್ಲಿ 25 ಗ್ರಾಪಂಗಳ ಮತ ಎಣಿಕೆ ಡಿ.30ರಂದು ನಡೆಸಲಾಗುವುದು ಎಂದು ತಹಸೀಲ್ದಾರ್ ಸಂಜಯ ಇಂಗಳೆ ತಿಳಿಸಿದರು.
ನಗರದ ಪಿಬಿ ಹೈಸ್ಕೂಲ್‌ನಲ್ಲಿನ ಮತ ಎಣಿಕೆ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಪೂರ್ವ ಸಿದ್ಧತೆಯನ್ನು ಪರಿಶೀಲಿಸಿ ಅವರು ಮಾತನಾಡಿದರು.
ತಾಲೂಕಿನ ಒಟ್ಟು 25 ಗ್ರಾಮ ಪಂಚಾಯಿತಿಗಳಿಗೆ ಪ್ರತಿಯೊಂದು ಗ್ರಾಮ ಪಂಚಾಯಿತಿಯಂತೆ ಒಟ್ಟು 25 ಕೊಠಡಿಗಳಲ್ಲಿ ಮತ ಎಣಿಕೆ ಕಾರ್ಯ ನಡೆಸಲಾಗುವುದು. ಪ್ರತಿ ಕೊಠಡಿಯಲ್ಲಿ ಚುನಾವಣೆ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿ, ಅಭ್ಯರ್ಥಿ ಹಾಗೂ ಕೌಂಟಿಂಗ್ ಏಜೆಂಟರ್‌ಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಭದ್ರತೆಗಾಗಿ ಪ್ರತಿ ಕೊಠಡಿಗೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಹಾಗೂ ಮತ ಎಣಿಕೆಗಾಗಿ ಪ್ರತಿ ಕೊಠಡಿಗಳಲ್ಲಿ ಮೂರು ಟೇಬಲ್ ನಿರ್ಮಿಸಲಾಗಿದ್ದು, ಒಂದು ಟೇಬಲ್‌ಗೆ ಒಬ್ಬರು ಮೇಲ್ವಿಚಾರಕರು, ಇಬ್ಬರು ಎಣಿಕೆ ಸಹಾಯಕರಂತೆ ಒಟ್ಟು 180 ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಪ್ರತಿಯೊಂದು ಟೇಬಲ್‌ನಲ್ಲಿ ಮೂರು ಸುತ್ತಿನ ಮತ ಎಣಿಕೆ ಕಾರ್ಯ ನಡೆಸಲಾಗುತ್ತದೆ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್‌ಗಳನ್ನು ಬಳಸುವುದು ನಿಷೇಧಿಸಲಾಗಿದೆ ಎಂದರು. ಪ್ರಾಚಾರ್ಯ ಎನ್.ಬಿ. ಬಿರಾದಾರ, ಕಂದಾಯ ನೀರಿಕ್ಷಕ ವೈ.ಎಚ್.ದ್ರಾಕ್ಷಿ, ಎಸ್.ವೈ.ಬಿರಾದಾರ ಇತರರು ಇದ್ದರು.
EndFragment