ಎಸ್ಟಿ ಪ್ರಮಾಣಪತ್ರ ನೀಡಲು ಆಗ್ರಹ

JKD 30-1
Published on

ಜಮಖಂಡಿ: ತಳವಾರ-ಪರಿವಾರ ಸಮಾಜದವರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ಎ.ಕೆ. ಇಂಡಿಕರ್ ಅವರಿಗೆ ಸಮಾಜದ ಮುಖಂಡರು ಮನವಿ ಸಲ್ಲಿಸಿದರು.

ಬುಧವಾರ ಮಿನಿ ವಿಧಾನಸೌಧದ ಆವರಣದಲ್ಲಿ ಸೇರಿದ್ದ ಸಮಾಜ ಬಾಂಧವರನ್ನುದ್ದೇಶಿಸಿ ಮಹೇಶ ಕೋಳಿ ಮಾತನಾಡಿ, ಸರ್ಕಾರಗಳ ಆದೇಶದಂತೆ ತಳವಾರ ಮತ್ತು ಪರಿವಾರ ಸಮಾಜದವರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡಬೇಕು. ಆದರೆ, ಅಧಿಕಾರಿಗಳು ಕಾಣದ ಕೈಗಳ ಒತ್ತಡಕ್ಕೆ ಮಣಿದು ಪ್ರಮಾಣಪತ್ರ ನೀಡದೆ ಕಾಲಹರಣ ಮಾಡುವ ಮೂಲಕ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರಗಳ ಸುತ್ತೋಲೆಯಂತೆ ಸಮಾಜದವರಿಗೆ ಕೂಡಲೇ ಎಸ್‌ಟಿ ಪ್ರಮಾಣ ಪತ್ರ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸಲಾಗುವುದು ಎಂದವರು ಎಚ್ಚರಿಸಿದರು.

ಉಮೇಶ ಗಸ್ತಿ, ಶಿವಪ್ಪ ಅಂಬಿ, ಕಾಶಿನಾಥ ಕಂಕನವಾಡಿ, ಶ್ರೀಕಾಂತ ಹಲಕಿ, ರಾಮು ತಳವಾರ, ಬಸವರಾಜ ಸೋಮಾಪುರ, ರವಿ ಬೆಳಗಲ್, ಬಸು ಕೋಳಿ ಸೇರಿದಂತೆ ನೂರಾರು ಜನ ಸಮಾಜದ ಜನರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net