ಜಮಖಂಡಿ ಮಾದರಿ ನಗರ ಮಾಡಲು ಸಂಕಲ್ಪ

JKD 8-1
Published on

ಜಮಖಂಡಿ: ಜಮಖಂಡಿಯನ್ನು ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

ನಗರದ ಓಲೇಮಠದಲ್ಲಿ ಡಾ.ಚನ್ನಬಸವ ಸ್ವಾಮಿಗಳಿಂದ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಮಖಂಡಿಯನ್ನು ಸ್ವಚ್ಛ, ಸುಂದರ ನಗರವನ್ನಾಗಿಸಲು ನಗರಸಭೆ ಅಧ್ಯಕ್ಷ ಹಾಗೂ ಸರ್ವ ಸದಸ್ಯರ ಜತೆ ಒಗ್ಗಟ್ಟಿನೊಂದಿಗೆ ಕಾರ್ಯ ಮಾಡಿ ಮಾದರಿ ನಗರವನ್ನಾಗಿಸುವ ಸಂಕಲ್ಪ ಮಾಡಲಾಗಿದೆ ಎಂದರು.

ಬಿಡಿಸಿಸಿ ಸಹಕಾರಿ ಬ್ಯಾಂಕ್‌ನ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಸಕ ಆನಂದ ನ್ಯಾಮಗೌಡ, ನಗರಸಭೆ ನೂತನ ಅಧ್ಯಕ್ಷ ಸಿದ್ದು ಮೀಶಿ ಹಾಗೂ ನಾಡೋಜ ಪ್ರಶಸ್ತಿಗೆ ಆಯ್ಕೆಯಾದ ಡಾ.ಎಚ್.ಜಿ. ದಡ್ಡಿ ಅವರನ್ನು ಸನ್ಮಾನಿಸಲಾಯಿತು. ನ್ಯಾಯವಾದಿ ಡಾ. ಮಲ್ಲಿಕಾರ್ಜುನಯ್ಯ ಮಠ, ರಾಜು ಸಿಕ್ಕಲಗಾರ, ಶಂಕರಯ್ಯ ಹಿರೇಮಠ ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net